• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿಗೆ ಮತಹಾಕುವುದು ಸರಿಯೇ ಎಂದು ಒಮ್ಮೆ ಯೋಚಿಸಿ ವೋಟ್ ಮಾಡಿ: ಕೇಜ್ರಿವಾಲ್

|
   ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಏನಾಗುತ್ತೆ ಗೊತ್ತಾ..?

   ನವದೆಹಲಿ, ಮೇ 10: ಆರನೇ ಹಂತದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆಬೀಳಲಿದೆ. ಭಾನುವಾರ (ಮೇ 12) ನಡೆಯಲಿರುವ ಚುನಾವಣೆಯಲ್ಲಿ ದೆಹಲಿಯ ಎಲ್ಲಾ ಏಳು ಲೋಕಸಭಾ ಕ್ಷೇತ್ರಗಳೂ ಸೇರಿವೆ.

   ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

   ದೆಹಲಿಯಲ್ಲಿ ಬಿಜೆಪಿ - ಆಪ್ - ಕಾಂಗ್ರೆಸ್ ನಡುವೆ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದ್ದು, ದೆಹಲಿಯ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಸಂಚಾಲಕ ದೆಹಲಿಯ ಮತದಾರರಲ್ಲಿ ಮನವಿಯೊಂದನ್ನು ಮಾಡಿದ್ದಾರೆ.

   ಬಿಜೆಪಿ ಜೊತೆ ನೇರ ಫೈಟ್ ಇರೋ ಜಾಗದಲ್ಲಿ ಅಣ್ಣತಂಗಿ ಇಬ್ಬರೂ ಇಲ್ಲ: ಕೇಜ್ರಿವಾಲ್ ಲೇವಡಿ

   ಒಂದು ವೇಳೆ ನರೇಂದ್ರ ಮೋದಿ ಸರಕಾರ ಮತ್ತೆ ಅಧಿಕಾರಕ್ಕೆ ಬಂದರೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೇಂದ್ರ ಗೃಹ ಸಚಿವರಾಗಲಿದ್ದಾರೆ. ಹಾಗಾಗಿ, ಎಲ್ಲಾ ಮತದಾರರು ಯೋಚಿಸಿ ಮತಹಾಕಬೇಕಿದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

   ದೇಶದ ಗೃಹ ಸಚಿವ ಅಮಿತ್ ಶಾ ಏನಾದರೂ ಆದರೆ, ಈ ರಾಷ್ಟ್ರದ ಪರಿಸ್ಥಿತಿ ಏನಾಗಬಹುದು ಎನ್ನುವುದನ್ನು ಎಲ್ಲರೂ ಅರಿಯಬೇಕು ಎಂದು ಮನವಿ ಮಾಡಿರುವ ಕೇಜ್ರಿವಾಲ್, ಪ್ರಧಾನಿ ಮೋದಿ ಒಬ್ಬ ನಕಲಿ ರಾಷ್ಟ್ರೀಯವಾದಿ ಎಂದು ಜರಿದಿದ್ದಾರೆ.

   ಪೊಲೀಸ್ ವರದಿ: ಕೇಜ್ರಿವಾಲ್ ಕಪಾಳಮೋಕ್ಷದ ಹಿಂದೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತನದ್ದೇ ಕಿತಾಪತಿ

   ಕೇಜ್ರಿವಾಲ್ ಈ ಹಿಂದೆ ಹಲವು ಬಾರಿ ಅಮಿತ್ ಶಾ, ಗೃಹಸಚಿವರಾಗಬಹುದು ಎನ್ನುವ ಹೇಳಿಕೆಯನ್ನು ನೀಡಿದ್ದರು. ಪಾಕ್ ಪ್ರಧಾನಿಯೊಬ್ಬರು ಇಂತವರಿಗೆ ಮತನೀಡಿ ಎಂದು ಹೇಳಿದ ಉದಾಹರಣೆ ನಮ್ಮ ಮುಂದಿಲ್ಲ, ಆದರೆ ಇಮ್ರಾನ್ ಖಾನ್, ಮೋದಿ ಪರವಾಗಿ ಬ್ಯಾಟ್ ಮಾಡಿದ್ದಾರೆಂದು ಕೇಜ್ರಿವಾಲ್ ಟೀಕಿಸಿದ್ದಾರೆ.

   ರಾಹುಲ್ ಮತ್ತು ಪ್ರಿಯಾಂಕಾ ಇಬ್ಬರೂ ಎಲ್ಲಿ ಬಿಜೆಪಿ ವಿರುದ್ದ ಕಾಂಗ್ರೆಸ್ಸಿಗೆ ನೇರ ಸ್ಪರ್ಧೆಯಿದೆಯೋ ಅಲ್ಲಿ ಪ್ರಚಾರಕ್ಕೆ ಹೋಗುತ್ತಿಲ್ಲ, ಪ್ರಿಯಾಂಕಾ ಸುಮ್ಮನೆ ಟೈಮ್ ವೇಸ್ಟ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ದವೂ ಕೇಜ್ರಿವಾಲ್ ಕಿಡಿಕಾರಿದ್ದರು.

   English summary
   Amit Shah could be next home minister if Narendra Modi returns to power, think before you vote: Delhi CM Arvind Kejriwal appeal to voters.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X