Get Updates
Get notified of breaking news, exclusive insights, and must-see stories!

ದೆಹಲಿಯಲ್ಲಿ 8.36 ರೂಪಾಯಿ ಕಡಿಮೆಯಾಗಲಿದೆ ಡೀಸೆಲ್ ದರ: ವ್ಯಾಟ್ ಇಳಿಸಲು ಕ್ಯಾಬಿನೆಟ್ ನಿರ್ಧಾರ

ನವದೆಹಲಿ, ಜುಲೈ 30: ರಾಷ್ಟ್ರ ರಾಜಧಾನಿಯಲ್ಲಿ ದೆಹಲಿಯಲ್ಲಿ ವ್ಯಾಟ್ ದರವನ್ನು ಇಳಿಸಲು ದೆಹಲಿ ಸರ್ಕಾರದ ಕ್ಯಾಬಿನೆಟ್ ನಿರ್ಧರಿಸಿದ್ದು, ಈ ಹಿಂದೆ ವಿಧಿಸಿದ್ದ ವ್ಯಾಟ್ ಶೇ 30 ರಿಂದ 16.75 ಪರ್ಸೆಂಟ್‌ಗೆ ತಗ್ಗಲಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಕೊರೊನಾ ಸಾಂಕ್ರಾಮಿಕ ಲಾಕ್‌ಡೌನ್ ಸಂದರ್ಭದಲ್ಲಿ ದೆಹಲಿ ಸರ್ಕಾರ ಸೇರಿದಂತೆ ದೇಶದ ಅನೇಕ ರಾಜ್ಯಗಳು ಆದಾಯ ಕೊರತೆ ಎದುರಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ತೈಲಗಳ ಮೇಲೆ ವ್ಯಾಟ್ ದರ ಏರಿಸಿದ್ದವು. ದೆಹಲಿಯಲ್ಲಿ ಡೀಸೆಲ್ ಮೇಲಿನ ವ್ಯಾಟ್ ಶೇ. 30ರಷ್ಟು ಏರಿಕೆ ಮಾಡಲಾಗಿತ್ತು. ಇದರಿಂದಾಗಿ ಡೀಸೆಲ್, ಪೆಟ್ರೋಲ್‌ಗಿಂತಲೂ ದುಬಾರಿಯಾಗಿದ್ದು ಕೂಡ ವರದಿಯಾಗಿತ್ತು.

ದೆಹಲಿ ಸರ್ಕಾರದ ವ್ಯಾಟ್ ಇಳಿಕೆಯ ನಿರ್ಧಾರದಿಂದ ಡೀಸೆಲ್ ಪ್ರತಿ ಲೀಟರ್‌ಗೆ 82 ರೂಪಾಯಿಯಿಂದ 73.64 ರೂಪಾಯಿಗೆ ತಗ್ಗಲಿದೆ. ಇದರಿಂದಾಗಿ ಡೀಸೆಲ್ ಪ್ರತಿ ಲೀಟರ್‌ಗೆ 8.36 ರೂಪಾಯಿ ಕಡಿಮೆಯಾಗಲಿದೆ.

Delhi Cabinet Has Decided To Reduce VAT On Diesel From 30% To 16.75%

ದೆಹಲಿ ಸರ್ಕಾರದ ಈ ನಿರ್ಧಾರವು ಇತರೇ ರಾಜ್ಯಗಳಲ್ಲಿ ಈಗಾಗಲೇ ತೈಲದ ಮೇಲಿನ ವ್ಯಾಟ್ ಏರಿಕೆಯನ್ನು ತಗ್ಗಿಸಲು ಪ್ರೇರೇಪಿಸುತ್ತದೇ ಎಂಬುದನ್ನು ಕಾದು ನೋಡಬೇಕು.

ಇನ್ನು ಇದೇ ವೇಳೆಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೆಲವೇ ದಿನಗಳ ಹಿಂದೆ ಘೋಷಿಸಲಾದ ಜಾಬ್ ಪೋರ್ಟಲ್‌ನಲ್ಲಿ ನಮಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಸುಮಾರು 7,577 ಕಂಪನಿಗಳು ನೋಂದಣಿಯಾಗಿವೆ, 2,04,785 ಉದ್ಯೋಗಗಳನ್ನು ಜಾಹೀರಾತು ಮಾಡಲಾಗಿದೆ ಮತ್ತು 3,22,865 ಜನರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+