'ಕೈ' ಬಿಟ್ಟು ಪೊರಕೆ ಹಿಡಿದ ವೀರೇಂದ್ರ ಸೆಹ್ವಾಗ್ ಸಹೋದರಿ

ನವದೆಹಲಿ, ಡಿಸೆಂಬರ್ 31: ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರ ಸಹೋದರಿ ಅಂಜು ಸೆಹ್ವಾಗ್ ಈಗ ಕಾಂಗ್ರೆಸ್ ತೊರೆದು ಹೊಸ ಪಕ್ಷವನ್ನು ಸೇರಿದ್ದಾರೆ. ಶುಕ್ರವಾರ ಅಂಜು ದೆಹಲಿಯ ಆಡಳಿತ ಪಕ್ಷ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರ್ಪಡೆಗೊಂಡರು. ಎಎಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಂಕಜ್ ಗುಪ್ತಾ ಮತ್ತು ಶಾಸಕ ಸೋಮನಾಥ್ ಭಾರ್ತಿ ಅವರು ಅಂಜು ಸೆಹ್ವಾಗ್ ಅವರಿಗೆ ಪಕ್ಷದ ಸದಸ್ಯತ್ವವನ್ನು ನೀಡಿದರು. ಅಂಜು ಅವರು ಮದಂಗೀರ್ ವಾರ್ಡ್‌ನಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಕೌನ್ಸಿಲರ್ ಆಗಿದ್ದಾರೆ. ಇದೀಗ 'ಆಮ್' ಸೇರುವ ಮೂಲಕ ತಮ್ಮ ಹೊಸ ಚುನಾವಣಾ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಗಮನಿಸಬೇಕಾದ ಅಂಶವೆಂದರೆ ಮುಂದಿನ ವರ್ಷ ಅಂದರೆ 2022ರಲ್ಲಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಜೊತೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಮುನ್ಸಿಪಲ್ ಚುನಾವಣೆಗಳು ನಡೆಯಲಿವೆ. ಇಂತಹ ಪರಿಸ್ಥಿತಿಯಲ್ಲಿ ಅಂಜು ಸೆಹ್ವಾಗ್ ಆಮ್ ಆದ್ಮಿ ಪಕ್ಷಕ್ಕೆ ಸೇರಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ತೊರೆದು ಆಪ್ ಸೇರಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅಂಜು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಕ್ಷದ ರಾಷ್ಟ್ರೀಯ ಸಂಚಾಲಕರ ನೀತಿಗಳಿಂದ ನಾನು ತುಂಬಾ ಪ್ರಭಾವಿತಳಾಗಿದ್ದೆ, ಹಾಗಾಗಿ ಆಪ್ ಕುಟುಂಬವನ್ನು ಸೇರಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.


ಇನ್ನೊಂದೆಡೆ ಅಂಜು ಅವರು ಆಮ್ ಆದ್ಮಿ ಪಕ್ಷ ಸೇರುವುದರಿಂದ ಆಡಳಿತ ಪಕ್ಷಕ್ಕೂ ರಾಜಕೀಯ ಲಾಭವಾಗಲಿದೆ. ನಗರಸಭೆ ಚುನಾವಣೆಗೂ ಮುನ್ನ ಸಮಾಜಸೇವಕಿ ಅಂಜು ಆಗಮಿಸುತ್ತಿರುವುದು ಪಕ್ಷಕ್ಕೆ ಬಲ ತುಂಬಲಿದೆ ಎನ್ನಲಾಗುತ್ತಿದೆ. ಅಂಜು ಸೆಹ್ವಾಗ್ ಅವರು ಎಸ್‌ಡಿಎಂಸಿಯ ಮಾಜಿ ಕೌನ್ಸಿಲರ್ ಆಗಿದ್ದಾರೆ. 2012ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಅಂಜು ಸೆಹ್ವಾಗ್​, ಪುರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಪಾಲಿಕೆ ಸದಸ್ಯೆಯಾಗಿದ್ದರು. ಇದಕ್ಕೂ ಮೊದಲು ಖಾಸಗಿ ಶಾಲೆವೊಂದರಲ್ಲಿ ಹಿಂದಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ.

Delhi: Anju Sehwag joins AAP, sister of former cricketer Virender Sehwag
ಪಾಲಿಕೆ ಚುನಾವಣೆಗೂ ಮುನ್ನವೇ ಹಲವು ಹಿರಿಯ ನಾಯಕರು ಕಾಂಗ್ರೆಸ್ ತೊರೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ವರ್ಷ ನಗರಸಭೆ ಚುನಾವಣೆಯಲ್ಲಿ ಶೇ.50ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಕಾಂಗ್ರೆಸ್ ಯುವ ಅಭ್ಯರ್ಥಿಗಳ ಮೇಲೆ ಪಣತೊಡುವ ನಿರೀಕ್ಷೆ ಇದೆ. ಮಾಜಿ ಮುಖ್ಯಮಂತ್ರಿ ದಿವಂಗತ ಶೀಲಾ ದೀಕ್ಷಿತ್ ಅವರ ಸಾಧನೆಯನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ಏಪ್ರಿಲ್ 2022 ರಲ್ಲಿ ನಡೆಯಲಿದ್ದು ಇನ್ನೂ ದಿನಾಂಕ ನಿಗದಿಯಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+