ಸೇನೆಯ ಮಾಜಿ ಮುಖ್ಯಸ್ಥರ ಪತ್ರ ನಕಲಿ: ನಿರ್ಮಲಾ ಸೀತಾರಾಮನ್
ನವದೆಹಲಿ, ಏ.12: ಕೆಲವು ರಾಜಕೀಯ ಪಕ್ಷಗಳು ಸೇನೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಸೇನೆಯ ಮಾಜಿ ಮುಖ್ಯಸ್ಥರು ರಾಷ್ಟ್ರಪತಿಗೆ ಯಾವುದೇ ಪತ್ರಬರೆದಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.
ನವದೆಹಲಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪತ್ರ ನಕಲಿ, ನಿವೃತ್ತ ಯೋಧರೂ ಯಾವುದೇ ಪತ್ರವನ್ನು ಬರೆದಿಲ್ಲ, ಯಾವ ಪತ್ರವೂ ರಾಷ್ಟ್ರಪತಿ ಭವನ ತಲುಪಿಲ್ಲ ಸ್ವತಃ ರಾಷ್ಟ್ರಪತಿ ಭವನವೇ ಈ ಕುರಿತು ಸ್ಪಷ್ಟನೆ ನೀಡಿದೆ ಎಂದು ಹೇಳಿದರು.

ಇಬ್ಬರು ಹಿರಿಯ ಅಧಿಕಾರಿಗಳು ತಾವು ಯಾವುದೇ ಪತ್ರಕ್ಕೆ ಸಹಿ ಹಾಕಿಲ್ಲ ಅದು ನಕಲಿ ಪತ್ರ ಎನ್ನುವ ಮಾಹಿತಿ ನೀಡಿದ್ದಾರೆ.ಒಟ್ಟು 150 ಮಂದಿ ನಿವೃತ್ತ ಯೋಧರು ಸಹಿ ಮಾಡಿದ್ದಾರೆ ಎನ್ನಲಾದ ಪತ್ರ ಮಾಧ್ಯಮಗಳಲ್ಲಿ ಹರಿದಾಡಿತ್ತು. ಭಾರತೀಯ ಸೇನೆಗೆ 'ಮೋದಿ ಸೇನೆ' ಎಂದು ಹೇಳಿಕೆ ವಿಚಾರ ಪ್ರಸ್ತಾಪಿಸಿರುವ ಅವರು ಸೇನೆಯ ಹೆಸರನ್ನು ರಾಜಕೀಯ ಪಕ್ಷಗಳು ಪ್ರಸ್ತಾಪಿಸದಂತೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿತ್ತು.
Nirmala Sitharaman on purported letter to Pres signed by Armed Forces veterans: Two senior officers said they have not given consent,worrying that fake letters being signed by vested groups.Condemnable. Rashtrapati Bhawan has also said that they have not received the letter. pic.twitter.com/7CqHmAcvA9
— ANI (@ANI) April 12, 2019












Click it and Unblock the Notifications