ಎದೆ ಸೋಂಕಿನಿಂದ ದಲೈ ಲಾಮಾ ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲು
ನವದೆಹಲಿ, ಏಪ್ರಿಲ್ 9: ಟಿಬೆಟನ್ ಧರ್ಮ ಗುರು ದಲೈ ಲಾಮಾ ಅವರು ಮಂಗಳವಾರದಂದು ನವದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಎದೆ ಸೋಂಕಿನ ಕಾರಣಕ್ಕೆ ಅವರನ್ನು ಅಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ದಲೈಲಾಮಾ ಅವರಿಗೆ ಮಂಗಳವಾರ ಬೆಳಗ್ಗೆ ಧರ್ಮಶಾಲಾದಲ್ಲಿ ಅಲ್ಪ ಪ್ರಮಾಣದಲ್ಲಿ ಸಮಸ್ಯೆ ಇದೆ ಎಂದು ಕಂಡುಬಂತು. ಮುಂಜಾಗ್ರತಾ ಕ್ರಮವಾಗಿ ನಾವು ದೆಹಲಿಗೆ ಬಂದೆವು ಎಂದು ದಲೈ ಲಾಮಾ ಅವರ ಖಾಸಗಿ ಕಾರ್ಯದರ್ಶಿ ತೆನ್ಝಿನ್ ಟಖ್ಲಾ ಮಾಧ್ಯಮ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ದಲೈ ಲಾಮಾ ಅವರಿಗೆ ಎದೆ ಸೋಂಕು ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಅವರು ಇನ್ನೂ ಎರಡ್ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೇ ಇದ್ದು, ಚಿಕಿತ್ಸೆ ಪಡೆಯಲಿದ್ದಾರೆ ಎಂದು ಕೂಡ ಅವರು ತಿಳಿಸಿದ್ದಾರೆ.

ಏಪ್ರಿಲ್ ಏಳನೇ ತಾರೀಕು ನವದೆಹಲಿಯಲ್ಲಿ ಜಾಗತಿಕ ಯುವ ನಾಯಕರ ಸಭೆಯಲ್ಲಿ ಭಾಗವಹಿಸಿದ್ದ ದಲೈ ಲಾಮಾ, ಆ ನಂತರ ಧರ್ಮಶಾಲಾಕ್ಕೆ ಹಿಂತಿರುಗಿದ್ದರು.












Click it and Unblock the Notifications