ಕಾಮನ್ ವೆಲ್ತ್ ಗೇಮ್ಸ್ ಹಗರಣ: ಆರೋಪಿಗಳಿಗೆ ಶಿಕ್ಷೆ ಪ್ರಕಟ
ನವದೆಹಲಿ, ಸೆ.02: ಬಹುಕೋಟಿ ಕಾಮನ್ ವೆಲ್ತ್ ಗೇಮ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಒಂದು ಕೇಸಿನ ತೀರ್ಪು ಬುಧವಾರ ಪ್ರಕಟಗೊಂಡಿದೆ. ಕಾಮನ್ ವೆಲ್ತ್ ಗೇಮ್ ಗ್ರಾಮ ನಿರ್ಮಾಣದ ಸಂದರ್ಭದಲ್ಲಿ ರಸ್ತೆ ಬೀದಿ ದೀಪ ಅಳವಡಿಕೆಯಲ್ಲಿ ಅವ್ಯವಹಾರ ನಡೆಸಿದ ಆರೋಪದ ಮೇಲೆ ಟಿಪಿ ಸಿಂಗ್ ಸೇರಿದಂತೆ ನಾಲ್ವರಿಗೆ ಶಿಕ್ಷೆ ಪ್ರಕಟಿಸಲಾಗಿದೆ.
ಸಿಬಿಐ ನ್ಯಾಯಾಲಯದ ವಿಶೇಷ ನ್ಯಾ. ಬ್ರಿಜೇಶ್ ಗರ್ಗ್ ಅವರು ಸೋಮವಾರ ನಾಲ್ವರು ಅಧಿಕಾರಿಗಳನ್ನು ಈ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದರು. ಬುಧವಾರ ಶಿಕ್ಷೆ ಪ್ರಮಾಣ ಪ್ರಕಟಿಸಲಾಗಿದೆ.
ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ನಾಲ್ವರು ಅಧಿಕಾರಿಗಳು ಸೇರಿದಂತೆ ಖಾಸಗಿ ಕಂಪನಿಯ ಇಬ್ಬರು ಅಧಿಕಾರಿಗಳು ಶಿಕ್ಷೆಗೊಳಗಾಗಿದ್ದಾರೆ. ಪ್ರಮುಖ ಆರೋಪಿ ಟಿಪಿ ಸಿಂಗ್ ಗೆ 6 ವರ್ಷ ಮಿಕ್ಕವರಿಗೆ 4 ವರ್ಷ ಶಿಕ್ಷೆ ನೀಡಲಾಗಿದೆ.

ಸಿಬಿಐ ತನಿಖೆ ನಡೆಸುತ್ತಿರುವ 2010ರ ಕಾಮನ್ ವೆಲ್ತ್ ಕ್ರೀಡಾಕೂಟದ ಹಗರಣದ ಮೊದಲ ತೀರ್ಪು ಇದಾಗಿದೆ. ದೆಹಲಿಯ ಬೀದಿ ದೀಪ ಅಳವಡಿಕೆ ಅವ್ಯವಹಾರದಿಂದಲೇ 1.25 ಕೋಟಿ ರು ನಷ್ಟ ಉಂಟಾಗಿದೆ.
ಎಂಸಿಡಿಯ ಇಂಜಿನಿಯರ್ ಡಿಕೆ ಸುಗಾನ್, ಕಾರ್ಯಕಾರಿ ಇಂಜಿನಿಯರ್ ಒಪಿ ಮಹಲಾ, ಅಕೌಂಟೆಂಟ್ ರಾಜು ವಿ,ಟೆಂಡರ್ ಕ್ಲರ್ಕ್ ಗುರ್ ಚರಣ ಸಿಂಗ್, ಮ್ಯಾನೇಜಿಂಗ್ ಡೈರೆಕ್ಟರ್ ಟಿಸಿ ಸಿಂಗ್, ಸ್ವೇಕಾ ಪವರ್ ಟೆಕ್ ಇಂಜಿನಿಯರ್ಸ್ ಪ್ರೈ ಲಿ ನ ನಿರ್ದೇಶಕ ಜೆಪಿ ಸಿಂಗ್ ಅವರು ಶಿಕ್ಷೆಗೊಳಪಟ್ಟಿದ್ದಾರೆ.












Click it and Unblock the Notifications