'ಕೊರೊನಾ ಇದುವರೆಗೂ ಸಮುದಾಯದ ಹಂತಕ್ಕೆ ಹರಡಿಲ್ಲ'

ದೆಹಲಿ, ಮಾರ್ಚ್ 30: ಭಾರತದಲ್ಲಿ ಕೊರೊನಾ ವೈರಸ್ ಮೂರನೇ ಹಂತ ತಲುಪಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಸುದ್ದಿಯನ್ನು ಕೇಂದ್ರ ಆರೋಗ್ಯ ಇಲಾಖೆ ನಿರಾಕರಿಸಿದೆ.

'ಇದುವರೆಗೂ ಕೊರೊನಾ ಸಮುದಾಯ ಹಂತವನ್ನು ತಲುಪಿಲ್ಲ' ಎಂದು ಸೋಮವಾರ ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

'ಕಳೆದ 24 ಗಂಟೆಯಲ್ಲಿ 92 ಕೊವಿಡ್ ಹೊಸ ಪ್ರಕರಗಳು ಪತ್ತೆಯಾಗಿದ್ದು, ಅದರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಲಾಕ್‌ಡೌನ್‌ ನಂತರ ನಾವು ಸರಿಯಾದ ಹಾದಿಯಲ್ಲಿದ್ದೇವೆ ಎಂದು ತಿಳಿದಿದೆ. ಆದರೆ, ಈ ಹಂತದಲ್ಲಿ ಲಾಕ್‌ಡೌನ್‌ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಬ್ಬ ವ್ಯಕ್ತಿ ಪಾಲಿಸದೇ ಇದ್ದರೂ ಅದರಿಂದ ಇಡೀ ಪ್ರಯತ್ನ ವ್ಯರ್ಥವಾಗಲಿದೆ' ಎಂದು ಲವ್ ಅಗರ್ವಾಲ್ ಹೇಳಿದ್ದಾರೆ.

COVID 19 Did Not Spread Community Level Said Union Health Ministry

'ಕೊರೊನಾ ಭಾರತದಲ್ಲಿ ಈವರೆಗೂ 1071 ಕೇಸ್ ದಾಖಲಾಗಿದೆ. ಬೇರೆ ದೇಶಗಳಿಗೆ ಹೋಲಿಸಿಕೊಂಡರೆ, ನಮ್ಮ ದೇಶದಲ್ಲಿ ಒಂದು ರೀತಿ ಸಕಾರಾತ್ಮಕವಾಗಿದೆ' ಎಂದು ತಿಳಿಸಿದ್ದಾರೆ.

ಸದ್ಯ, ಜಗತ್ತಿನಾದ್ಯಂತ ಕೊರೊನಾ ಪ್ರಕರಣಗಳ ಅಂಕಿ-ಅಂಶ ನೋಡಿದ್ರೆ, 739,057 ಜನರಲ್ಲಿ ಸೋಂಕು ದೃಢವಾಗಿದೆ. 35,015 ಜನರು ಪ್ರಾಣ ಕಳೆದುಕೊಂಡಿದ್ದಾರೆ. 156,321 ಜನರು ಇದರಿಂದ ಚೇತರಿಕೆ ಕಂಡಿದ್ದಾರೆ. ಇದುವರೆಗೂ ಇಟಲಿಯಲ್ಲಿ 10,779 ಜನರು ಸಾವನ್ನಪ್ಪಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+