6 ದಿನದಲ್ಲಿ ಒಂದು ಲಕ್ಷ ಕೇಸ್, ಈಗಲೂ ಸಮುದಾಯಕ್ಕೆ ಹರಡಿಲ್ವಾ ಕೊರೊನಾ?

ದೆಹಲಿ, ಜೂನ್ 27: ಭಾರತದಲ್ಲಿ ಕೊರೊನಾ ವೈರಸ್ ಸಮುದಾಯ ಹಂತಕ್ಕೆ ಹರಡಿದ್ಯಾ ಎಂಬ ಅನುಮಾನ ಬಲವಾಗಿ ಕಾಡುತ್ತಿದೆ. ಆದರೆ, ಕೇಂದ್ರ ಸರ್ಕಾರವಾಗಲಿ ಅಥವಾ ಯಾವುದೇ ರಾಜ್ಯ ಸರ್ಕಾರವಾಗಲಿ, ಐಸಿಎಂಆರ್ ಆಗಲಿ ಈ ಬಗ್ಗೆ ಒಪ್ಪಿಕೊಳ್ಳುತ್ತಿಲ್ಲ.

ಆದರೆ, ದೈನಂದಿನ ಅಂಕಿ ಅಂಶಗಳನ್ನು ಗಮನಿಸುತ್ತಿದ್ದರೆ ನಿಜಕ್ಕೂ ಆತಂಕ ಹುಟ್ಟಿಸುತ್ತಿದೆ. ಇಂದು ಒಂದೇ ದಿನ 18,552 ಜನರಿಗೆ ಕೊವಿಡ್ ಸೋಂಕು ತಗುಲಿದೆ. ಈ ವರೆಗೂ ದಿನವೊಂದರಲ್ಲಿ ವರದಿಯಾಗಿರುವ ಗರಿಷ್ಠ ಕೇಸ್ ಇದಾಗಿದೆ.

ಇಲ್ಲಿ ಗಮನಿಸಬೇಕಾದ ಸಂಗತಿ ಅಂದ್ರೆ ನಾಲ್ಕರಿಂದ ಐದು ಲಕ್ಷ ಕೇಸ್ ದಾಖಲಾಗಲು ಭಾರತ ತೆಗೆದುಕೊಂಡ ಸಮಯ ಕೇವಲ ಆರು ದಿನ. 6 ದಿನದಲ್ಲಿ ಒಂದು ಲಕ್ಷ ಕೇಸ್ ವರದಿಯಾಗಿದೆ. ಮುಂದೆ ಓದಿ....

ಅತಿ ವೇಗವಾಗಿ ಒಂದು ಲಕ್ಷ ಕೇಸ್

ಅತಿ ವೇಗವಾಗಿ ಒಂದು ಲಕ್ಷ ಕೇಸ್

ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 5,08,953 ಲಕ್ಷಕ್ಕೆ ಏರಿದೆ. ಆತಂಕಕಾರಿ ವಿಷಯ ಅಂದ್ರೆ ಕೇವಲ 6 ದಿನದಲ್ಲಿ ಒಂದು ಲಕ್ಷ ಕೇಸ್ ವರದಿಯಾಗಿದೆ. ಅಂದ್ರೆ ನಾಲ್ಕು ಲಕ್ಷದಿಂದ ಐದು ಲಕ್ಷಕ್ಕೆ ತಲುಪಲು ಭಾರತ ತೆಗೆದುಕೊಂಡ ಸಮಯ ಆರು ದಿನ ಮಾತ್ರ. ಕಳೆದ ಆರು ದಿನದಲ್ಲಿ ಒಟ್ಟು 98,492 ಜನರಿಗೆ ಕೊವಿಡ್ ಸೋಂಕು ತಗುಲಿದೆ.

ಕಳೆದ ಆರು ದಿನ ಅಂಕಿ ಅಂಶದ ವಿವರ

ಕಳೆದ ಆರು ದಿನ ಅಂಕಿ ಅಂಶದ ವಿವರ

-ಜೂನ್ 22 ರಂದು 14,821 ಕೇಸ್

-ಜೂನ್ 23 ರಂದು 14,933 ಕೇಸ್

-ಜೂನ್ 24 ರಂದು 15,968 ಪ್ರಕರಣ

-ಜೂನ್ 25 ರಂದು 16,922 ಕೇಸ್

-ಜೂನ್ 26 ರಂದು 17,296 ಪ್ರಕರಣ

-ಜೂನ್ 27 ರಂದು 18,552 ಮಂದಿಗೆ ಸೋಂಕು ತಗುಲಿದೆ.

ಈ ಹಿಂದೆ ಲಕ್ಷ ಕೇಸ್ ಆಗಲು ತೆಗೆದುಕೊಂಡ ಸಮಯ ಎಷ್ಟು?

ಈ ಹಿಂದೆ ಲಕ್ಷ ಕೇಸ್ ಆಗಲು ತೆಗೆದುಕೊಂಡ ಸಮಯ ಎಷ್ಟು?

-ಸೊನ್ನೆಯಿಂದ ಒಂದು ಲಕ್ಷ ಕೊರೊನಾ ಕೇಸ್ ದಾಖಲಾಗಲು ತೆಗೆದುಕೊಂಡು ಸಮಯ 110 ದಿನ.

-ಒಂದು ಲಕ್ಷ ದಿಂದ ಎರಡು ಲಕ್ಷ ಕೇಸ್ ವರದಿಯಾಗಲು ತೆಗೆದುಕೊಂಡ ಸಮಯ 15 ದಿನ.

-ಎರಡು ಲಕ್ಷದಿಂದ ಮೂರು ಲಕ್ಷ ಸೋಂಕು ವರದಿಯಾಗಿದ್ದು 10 ದಿನದಲ್ಲಿ.

-ಮೂರು ಲಕ್ಷದಿಂದ ನಾಲ್ಕು ಲಕ್ಷ ಪ್ರಕರಣ ದಾಖಲಾಗಿದ್ದು 8 ದಿನದಲ್ಲಿ.

-ನಾಲ್ಕು ಲಕ್ಷದಿಂದ ಐದು ಲಕ್ಷಕ್ಕೆ ತೆಗೆದುಕೊಂಡ ಸಮಯ 6 ದಿನ.

ಸಮುದಾಯ ಹಂತ ತಲುಪಿಲ್ವಾ?

ಸಮುದಾಯ ಹಂತ ತಲುಪಿಲ್ವಾ?

ಪ್ರಸ್ತುತ ಭಾರತದಲ್ಲಿ 18.5 ಸಾವಿರ ಕೇಸ್ ವರದಿಯಾಗುತ್ತಿದೆ. ದೆಹಲಿ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ದಿನವೊಂದಕ್ಕೆ 3 ರಿಂದ 4 ಸಾವಿರ ಕೇಸ್ ವರದಿಯಾಗುತ್ತಿದೆ. ಆರು ದಿನದಲ್ಲಿ 1 ಲಕ್ಷ ದಾಖಲಾಗುತ್ತಿದೆ. ಈ ಅಂಕಿ ಅಂಶಗಳನ್ನು ನೋಡಿದ್ಮೇಲೆ ಸಮುದಾಯ ಹಂತಕ್ಕೆ ತಲುಪಿಲ್ವಾ ಎಂಬ ಅನುಮಾನ ಕಾಡ್ತಿದೆ. ಇದಕ್ಕೆ ಸರ್ಕಾರವೇ ಉತ್ತರಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+