ಕ್ವಾರಂಟೈನ್ ಕೊಠಡಿಯಲ್ಲೇ ತಬ್ಲಿಘಿ ಸದಸ್ಯರ ದುರ್ನಡತೆಯ ಪರಮಾವಧಿ
ನವದೆಹಲಿ, ಏಪ್ರಿಲ್ 7: ಕ್ವಾರಂಟೈನ್ ನಲ್ಲಿರುವ ಕೆಲವು ತಬ್ಲಿಘಿ ಸದಸ್ಯರ ದುರ್ನಡತೆ ಮುಂದುವರಿದಿದ್ದು, ಆಸ್ಪತ್ರೆಯ ಕೊಠಡಿಯಲ್ಲೇ ಮಲ ವಿಸರ್ಜನೆ ಮಾಡಿದ್ದಾರೆ.
ರಾಜಧಾನಿಯ ನರೇಲಾ ಕ್ವಾರಂಟೈನ್ ನಲ್ಲಿರುವ ಇಬ್ಬರು ಸದಸ್ಯರು ರೂಂನಲ್ಲೇ ಇಂತಹ ಕೆಲಸ ಮಾಡಿದ್ದು, ಇವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇವರಿಬ್ಬರೂ ಕಳೆದ ತಿಂಗಳು ದೆಹಲಿಯ ನಿಜಾಮುದ್ದೀನ್ ತಬ್ಲಿಘ್ ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಬ್ಬರೂ, ಉತ್ತರ ಪ್ರದೇಶದ ಬಾರಾಬಂಕಿ ಮೂಲದವರಾಗಿದ್ದಾರೆ.

ಕ್ವಾರಂಟೈನ್ ಕೇಂದ್ರದ ಎರಡನೇ ಮಹಡಿಯಲ್ಲಿ, ತಮ್ಮ ಕೊಠಡಿಯ ಮುಂದೆ ಇವರು ಮಲವಿಸರ್ಜನೆ ಮಾಡಿದ್ದಾರೆ. ಸ್ವಚ್ಚತಾ ಕಾರ್ಯ ನಡೆಸಿದ ಇಲ್ಲಿನ ಸಿಬ್ಬಂದಿಗಳು, ಪೊಲೀಸರಿಗೆ ಮಾಹಿತಿ ಈ ಬಗ್ಗೆ ನೀಡಿದ್ದಾರೆ.
ಕ್ವಾರಂಟೈನ್ ನಿಯಮಗಳನ್ನು ಪಾಲಿಸದೇ ಇತರರ ಜೀವದ ಜೊತೆಗೆ ಇವರು ಆಟವಾಡುತ್ತಿದ್ದಾರೆಂದು, ಇವರ ವಿರುದ್ದ ಎಫ್ ಐಆರ್ ದಾಖಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಮೊಹಮ್ಮದ್ ಫಹದ್ (25) ಮತ್ತು ಅದ್ನಾಂ ಜಹೀರ್ (18), ಕ್ವಾರಂಟೈನ್ ಕೊಠಡಿಯಲ್ಲಿ ಈ ರೀತಿ ದುರ್ನಡದೆ ತೋರಿದ ತಬ್ಲಿಫಿ ಸದಸ್ಯರಾಗಿದ್ದಾರೆ












Click it and Unblock the Notifications