Breaking: ಸೋನಿಯಾ ಗಾಂಧಿಗೆ ಕೊರೋನಾ ಪಾಸಿಟಿವ್
ನವದೆಹಲಿ, ಜೂ. 2: ಸೋನಿಯಾ ಗಾಂಧಿ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ವಿಚಾರಣೆಗೆ ಹಾಜರಾಗಲು ಒಂದು ವಾರ ಇರುವಂತೆಯೇ ಈ ಬೆಳವಣಿಗೆ ಆಗಿದೆ.
ನಿನ್ನೆ ಬುಧವಾರ ಸಂಜೆ ಸೋನಿಯಾ ಗಾಂಧಿ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಗಂಭೀರವಲ್ಲದ ರೋಗಲಕ್ಷಣಗಳಿದ್ದು, ಸದ್ಯಕ್ಕೆ ಅವರು ಆಸ್ಪತ್ರೆಗೆ ದಾಖಲಾಗದೆ ಐಸೊಲೋಶನ್‌ನಲ್ಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ ತಿಳಿಸಿದ್ದಾರೆ.
ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಕಳೆದ ವಾರದಂದು ವಿವಿಧ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಹಲವು ಸಭೆಗಳನ್ನು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಕಳುಹಿಸಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಹೇಳಿದ್ದರು. ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಪ್ರಕಾರ, ಜೂನ್ 8 ರಂದು ತನ್ನ ಮುಂದೆ ಹಾಜರಾಗುವಂತೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಇಡಿ ತಿಳಿಸಿದೆ. ಸೋನಿಯಾ ಗಾಂಧಿ ಅವರು ಖಚಿತವಾಗಿ ಇಡಿಗೆ ಹೋಗುತ್ತಾರೆ, ಆದರೆ ರಾಹುಲ್ ಗಾಂಧಿ ಈಗ ವಿದೇಶದಲ್ಲಿದ್ದಾರೆ. ಅವರು ಹಿಂದಿರುಗಿದ ಬಳಿಕ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುತ್ತಾರೆ. ನಿಗದಿತ ದಿನಾಂಕದಂದು ಇಲ್ಲದಿದ್ದರೆ ಅವರು ಸ್ವಲ್ಪ ಸಮಯಾವಕಾಶ ಕೇಳಬಹುದು ಎಂದು ಅವರು ಹೇಳಿದ್ದರು.












Click it and Unblock the Notifications