ಕೀಳು ರಾಜಕೀಯ:ರಕ್ತ ಕಾರುವ ಸೋನಿಯಾ ಪೋಸ್ಟರ್
ನವದೆಹಲಿ, ಅ 10: ರಾಜಕೀಯ ಅಂದ ಮೇಲೆ ಆರೋಪ, ಪ್ರತ್ಯಾರೋಪ ಸಹಜ. ಆದರೆ ಯಾವುದೇ ರಾಜಕೀಯ ಪಕ್ಷಗಳು, ರಾಜಕೀಯ ನಾಯಕರು ಈ ರೀತಿಯ ಕೀಳು ಮಟ್ಟದ ರಾಜಕಾರಣ ಮಾಡಿ, ಪ್ರಚಾರ ಗಿಟ್ಟಿಸುವುದು ತಪ್ಪಲ್ಲದೇ ಮತ್ತಿನ್ನೇನು?
ಇಲ್ಲಿರುವ ಪೋಸ್ಟರನ್ನು ಒಮ್ಮೆ ನೋಡಿ. ಇದು ದೇಶದ ರಾಜಧಾನಿಯಲ್ಲಿ ರಾರಾಜಿಸುತ್ತಿರುವ ಪೋಸ್ಟರ್. ಇದರಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಅತ್ಯಂತ ವಿಕಾರವಾಗಿ ತೋರಿಸಲಾಗಿದೆ.
ಸೋನಿಯಾ ಜೊತೆ ಕಾಂಗ್ರೆಸ್ ಪಕ್ಷದ ಇತರ ನಾಯುಕರ ಫೋಟೋ ಈ ಪೋಸ್ಟರ್ ನಲ್ಲಿ ನೋಡಬಹುದಾಗಿದೆ. ಸೋನಿಯಾ ಗಾಂಧಿ ರಕ್ತ ಕಾರುತ್ತಿರುವ ಈ ಪೋಸ್ಟರ್ ಜೊತೆಗೆ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರನ್ನು ಮಾಲೆಯ ರೂಪದಲ್ಲಿ ಸೋನಿಯಾ ಧರಿಸಿ ಕೊಂಡಿದ್ದಾರೆ. ನವದೆಹಲಿಯ ಆಂಧ್ರ ಭವನದ ಮುಂದೆ ಈ ಪೋಸ್ಟರ್ ರಾರಾಜಿಸುತ್ತಿದೆ.

ಬುಧವಾರ (ಅ. 9) ತೆಲುಗು ದೇಶಂ ಪಕ್ಷದ ಕಾರ್ಯಕರ್ತನೊಬ್ಬ ಈ ಪೋಸ್ಟರ್ ಅನ್ನು ಇಲ್ಲಿ ತಗಲಾಕಿದ್ದಾನೆ ಎನ್ನಲಾಗುತ್ತಿದೆ. ಇಲ್ಲಿ ಸದ್ಯ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಉಪವಾಸ ನಡೆಸುತ್ತಿರುವ ಚಂದ್ರಬಾಬು ನಾಯ್ಡು ಜೊತೆ ಸಮಾಲೋಚಿಸಲು ಯಾವುದೇ ಕೇಂದ್ರದ ನಾಯಕರು ಬರದೇ ಇದ್ದಿರುವುದು ಪೋಸ್ಟರ್ ಹಾಕಲು ಕಾರಣ ಎನ್ನಲಾಗುತ್ತಿದೆ.












Click it and Unblock the Notifications