ದೆಹಲಿಯಲ್ಲಿ ಅಪಘಾತ ಗಾಯಾಳುವಿಗೆ ನೆರವಾದ ರಾಹುಲ್ ಗಾಂಧಿ
ನವದೆಹಲಿ, ಮಾರ್ಚ್ 27: ಅಪಘಾತಕ್ಕೀಡಾದ ಪತ್ರಕರ್ತರೊಬ್ಬರ ನೆರವಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ನಿಂತಿದ್ದು, ಬಹಳಾ ದೊಡ್ಡ ಸುದ್ದಿಯಾಗಿದೆ. ನವದೆಹಲಿಯ ಹುಮಾಯೂನ್ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ಪತ್ರಕರ್ತರೊಬ್ಬರಿಗೆ ಅಪಘಾತ ಆಗಿದೆ. ಕೂಡಲೇ ಅವರ ನೆರವಿಗೆ ಧಾವಿಸಿದ ರಾಹುಲ್ ಗಾಂಧಿ, ಏಮ್ಸ್ ಗೆ ಕರೆದೊಯ್ದಿದ್ದಾರೆ.
A media person who met with an accident on Delhi's Humayun Road, was 'rescued' by Congress President @RahulGandhi who was passing through the area. @THNewDelhi @the_hindu pic.twitter.com/Fiv68PN459
— Saurabh Trivedi (@saurabh3vedi) 27 March 2019
ರಾಜಸ್ತಾನದಲ್ಲಿ ಸ್ಥಳೀಯ ಪತ್ರಿಕೆಯೊಂದನ್ನು ನಡೆಸುವ ರಾಜೇಂದ್ರ ವ್ಯಾಸ್ ಗಾಯಗೊಂಡ ಪತ್ರಕರ್ತ. ರಸ್ತೆ ದಾಟುವ ವೇಳೆ ಅವರಿಗೆ ವಾಹನವೊಂದು ಡಿಕ್ಕಿ ಹೊಡೆದಿತ್ತು. ಅದೇ ರಸ್ತೆಯಲ್ಲಿ ಸಾಗುತ್ತಿದ್ದ ರಾಹುಲ್ ಗಾಂಧಿ ಅವರು ಕೂಡಲೇ ತಮ್ಮ ವಾಹನದಲ್ಲಿ ಗಾಯಾಳುವನ್ನು ಏಮ್ಸ್ ಗೆ ಕರೆದೊಯ್ದಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಏಮ್ಸ್ ನ ಮಾಹಿತಿ ಪ್ರಕಾರ, ಗಾಯಾಳುವಿಗೆ ಪ್ರಥಮ ಚಿಕಿತ್ಸೆ ಮಾಡಲಾಗಿದೆ. ಕೈ ಕಾಲಿಗೆ ಅಲ್ಪ ಪ್ರಮಾಣದ ಗಾಯಗಳಾಗಿದ್ದವು. ಅವರಿಗೆ ಯಾವುದೇ ಪರೀಕ್ಷೆ ಅಗತ್ಯ ಇರಲಿಲ್ಲ. ಅವರು ಚೆನ್ನಾಗಿದ್ದರು. ಆದ್ದರಿಂದ ಆ ಕೂಡಲೇ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಿದ್ದಾಗಿ ತಿಳಿಸಿದ್ದಾರೆ. ಗಾಯಾಳುವಿಗೆ ಚಿಕಿತ್ಸೆ ನಡೆಯುತ್ತಿದ್ದ ಅಷ್ಟೂ ಸಮಯ ಹಾಗೂ ಅವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುವ ತನಕ ರಾಹುಲ್ ಗಾಂಧಿ ಅಲ್ಲೇ ಇದ್ದರು ಎಂದು ತಿಳಿದುಬಂದಿದೆ.












Click it and Unblock the Notifications