Get Updates
Get notified of breaking news, exclusive insights, and must-see stories!

'ಪ್ರಿಯಾಂಕ ಚೋಪ್ರಾ ಜಿಂದಾಬಾದ್' ಎಂದ ಕಾಂಗ್ರೆಸ್ ಮುಖಂಡ: ಮುಸಿಮುಸಿ ನಕ್ಕ ಜನ!

ನವದೆಹಲಿ, ಡಿ 2 (ANI): ಅರರೇ.. ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ, ಅದ್ಯಾವಾಗ, ಕಾಂಗ್ರೆಸ್ ಸೇರಿದರು ಎಂದು ಆಶ್ಚರ್ಯ ಪಡಬೇಕಾಗಿಲ್ಲ. ಇದೊಂದು, ಕಾಂಗ್ರೆಸ್ ನಾಯಕರೊಬ್ಬರು ಮಾಡಿದ ಎಡವಟ್ಟು.

ಕಾಂಗ್ರೆಸ್ಸಿನ ಹಿರಿಯ ಮುಖಂಡ ಸುರೇಂದರ್ ಕುಮಾರ್ ಬಾಯಿತಪ್ಪಿನಿಂದ ಮಾಡಿದ ಘೋಷಣೆಯೊಂದು, ಅವರನ್ನು ತೀವ್ರ ಮುಜುಗರಕ್ಕೀಡಾಗುವಂತೆ ಮಾಡಿದೆ.

ದೇಶದಲ್ಲಿ, ತಮ್ಮತಮ್ಮ ಪಕ್ಷದ ನಾಯಕರನ್ನು ಓಲೈಸುವ ಸಂಪ್ರದಾಯದಂತೆ, ಸುರೇಂದರ್, ತುಂಬಿದ ಸಭೆಯಲ್ಲಿ, "ಸೋನಿಯಾ ಗಾಂಧಿ ಜಿಂದಾಬಾದ್, ಕಾಂಗ್ರೆಸ್ ಪಾರ್ಟಿ ಜಿಂದಾಬಾದ್, ರಾಹುಲ್ ಗಾಂಧಿ ಜಿಂದಾಬಾದ್, ಪ್ರಿಯಾಂಕ ಚೋಪ್ರಾ ಜಿಂದಾಬಾದ್" ಎಂದು ಘೋಷಣೆ ಕೂಗಿದ್ದಾರೆ.

Congress Leader Says Priyanka Chopra Zindabad, Instead Of Priyanka Gandhi: Video Goes Viral

ಪ್ರಿಯಾಂಕ ಗಾಂಧಿ ಜಿಂದಾಬಾದ್ ಎನ್ನುವ ಬದಲು, ಚೋಪ್ರಾ ಎಂದು ಸುರೇಂದರ್ ಕುಮಾರ್ ಘೋಷಣೆ ಮಾಡಿದಾಗ, ದೆಹಲಿ ಕಾಂಗ್ರೆಸ್ ಘಟಕದ ಮುಖ್ಯಸ್ಥ ಸುಭಾಶ್ ಚೋಪ್ರಾ ಕೂಡಾ ಅಲ್ಲೇ ವೇದಿಕೆಯಲ್ಲಿದ್ದರು.

ಪತಿ ನಿಕ್ ಜೋನ್ಸ್ ಜೊತೆ ಮೊದಲನೇ ಮದುವೆ ವಾರ್ಷಿಕೋತ್ಸವದ ಮೂಡ್ ನಲ್ಲಿರುವ ಪ್ರಿಯಾಂಕ ಚೋಪ್ರಾಗೆ ಇದು ಕಾಂಗ್ರೆಸ್ ನೀಡಿದ ಸರ್ಪ್ರೈಸ್ ಗಿಫ್ಟ್ ಎಂದು ಸಾಮಾಜಿಕ ತಾಣದಲ್ಲಿ ಲೇವಡಿ ಮಾಡಲಾಗುತ್ತಿದೆ.

"ಜೀವನದಲ್ಲಿ ತುಂಬಾ ತಲೆಕೆಟ್ಟಾಗ ಇಂತಹ ಜೋಕ್ಸ್ ವಿಡಿಯೋಗಳು ಮನಸ್ಸಿಗೆ ಮುದ ನೀಡುತ್ತವೆ. ದೇಸೀ ಗರ್ಲ್ ಪ್ರಿಯಾಂಕ ಚೋಪ್ರಾಗೆ ಕಾಂಗ್ರೆಸ್ಸಿಗೆ ಸ್ವಾಗತ" ಈ ರೀತಿಯ ಪ್ರತಿಕ್ರಿಯೆಗಳು ಈ ವಿಡಿಯೋಗೆ ಬರುತ್ತಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+