ಸೋನಿಯಾ ಗಾಂಧಿ ಆರೋಗ್ಯ ಸ್ಥಿರ, ದೆಹಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ನವದೆಹಲಿ ಫೆಬ್ರವರಿ.05: ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಬುಧವಾರ ಬೆಳಗ್ಗೆ ನವದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.

ಫೆಬ್ರವರಿ.02ರ ಭಾನುವಾರ ಸಂಜೆ 7 ಗಂಟೆ ವೇಳೆಯಲ್ಲಿ ಹೊಟ್ಟೆನೋವಿನ ಕಾರಣಕ್ಕೆ ಸೋನಿಯಾ ಗಾಂಧಿ ಅವರನ್ನು ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರುಗಳ ಕಾಲ ವೈದ್ಯರ ಚಿಕಿತ್ಸೆ ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಬುಧವಾರ ಬೆಳಗ್ಗೆಯ ಹೊತ್ತಿಗೆ 73 ವರ್ಷದ ಸೋನಿಯಾ ಗಾಂಧಿ ಆರೋಗ್ಯ ಸ್ಥಿರವಾಗಿದ್ದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಗಂಗಾರಾಮ್ ಆಸ್ಪತ್ರೆಯ ಚೇರ್ ಮನ್ ಡಿ.ಎಸ್.ರಾಣಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Congress Interim President Sonia Gandhi Discharged From Delhi Gangaram Hospital

ಇನ್ನು, ಅನಾರೋಗ್ಯದ ಹಿನ್ನೆಲೆಯಲ್ಲಿ ಫೆಬ್ರವರಿ.02ರಂದು 2020-21ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಅಧಿವೇಶನಕ್ಕೂ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಜರ್ ಆಗಿರಿಲಿಲ್ಲ. ಕಳೆದ ವರ್ಷದವರೆಗೂ ತಮ್ಮ ವೈದ್ಯಕೀಯ ಪರೀಕ್ಷೆಗಾಗಿಯೇ ನಿಯಮಿತವಾಗಿ ಸೋನಿಯಾ ಗಾಂಧಿ ಯುನೈಟೆಡ್ ಸ್ಟೇಟ್ಸ್ (ಯುಎಸ್ಎ)ಗೆ ತೆರಳುತ್ತಿದ್ದರು. ಆಗೆಲ್ಲ ಪುತ್ರ ರಾಹುಲ್ ಗಾಂಧಿ ಅಥವಾ ಪುತ್ರಿ ಪ್ರಿಯಾಂಕಾ ವಾದ್ರಾ ಜೊತೆಗೆ ಇರುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+