ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು: ವರದಿ
ನವದೆಹಲಿ, ಫೆಬ್ರವರಿ.02: ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ, 73 ವರ್ಷದ ಸೋನಿಯಾ ಗಾಂಧಿ ಭಾನುವಾರ ಸಂಜೆ ಹೊಟ್ಟೆ ನೋವಿನ ಕಾರಣಕ್ಕೆ ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆಯು ವರದಿ ಮಾಡಿದೆ.
ದಿ ಲೇಡಿ ಇನ್ ಕಾಟನ್ ಸ್ಯಾರಿ: ಸೋನಿಯಾ ಗಾಂಧಿ ನಿಜಕ್ಕೂ ಯಾರು?
ವರದಿ ಪ್ರಕಾರ ಇದು ಮಾಮೂಲಿನ ವೈದ್ಯಕೀಯ ಪರಿಶೀಲನೆ ಅಷ್ಟೇ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಸೋನಿಯಾ ಗಾಂಧಿ ಒಳಗಾಗಲಿದ್ದಾರೆ. ಶನಿವಾರ ಮಂಡಿಸಲಾದ ಕೇಂದ್ರ ಬಜೆಟ್ ಅಧಿವೇಶನದಲ್ಲಿ ಸೋನಿಯಾ ಗಾಂಧಿ ಭಾಗವಹಿಸಿರಲಿಲ್ಲ.

ಕಳೆದ ವರ್ಷದವರೆಗೂ ತಮ್ಮ ವೈದ್ಯಕೀಯ ಪರೀಕ್ಷೆಗಾಗಿಯೇ ನಿಯಮಿತವಾಗಿ ಸೋನಿಯಾ ಗಾಂಧಿ ಯುನೈಟೆಡ್ ಸ್ಟೇಟ್ಸ್ (ಯುಎಸ್ಎ)ಗೆ ತೆರಳುತ್ತಿದ್ದರು. ಆಗೆಲ್ಲ ಪುತ್ರ ರಾಹುಲ್ ಗಾಂಧಿ ಅಥವಾ ಪುತ್ರಿ ಪ್ರಿಯಾಂಕಾ ವಾದ್ರಾ ಜೊತೆಗೆ ಇರುತ್ತಿದ್ದರು. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.












Click it and Unblock the Notifications