ಬ್ಯಾಂಕ್ ಗಳಲ್ಲಿ ಮಾಹಿತಿ ತಿಳಿಸುವಂತಹ ರೊಬೋಟ್ ರೆಡಿಯಾಗಿದೆ

Posted By:
Subscribe to Oneindia Kannada

ನವದೆಹಲಿ,ಡಿಸೆಂಬರ್, 3: ನೋಟು ನಿಷೇಧದ ಪರಿಣಾಮದಿಂದ ನಗದು ಸಮಸ್ಯೆ ವಿಪರೀತವಾಗಿ ಕಾಡುತ್ತಿದೆ. ಸಾಧ್ಯವಾದಷ್ಟು ಆನ್ ಲೈನ್ ಬ್ಯಾಂಕಿಂಗ್ ವ್ಯವಹಾರ ನಡೆಸುವಂತೆ ಸರ್ಕಾರ ಮತ್ತು ಬ್ಯಾಂಕ್ ಗಳು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿವೆ.

ಆದರೆ ಹಲವು ಮಂದಿ ಬ್ಯಾಂಕ್ ಖಾತೆಯನ್ನೇ ಹೊಂದಿರುವುದಿಲ್ಲ. ಅಷ್ಟೇ ಅಲ್ಲದೆ ಬ್ಯಾಂಕಿಂಗ್ ವ್ಯವಹಾರ ಕುರಿತು ಜ್ಞಾನವೂ ಇರುವುದಿಲ್ಲ. ಇಂತಹವರಿಗಾಗಿಯೇ ಒಂದು ಶುಭಸುದ್ದಿ ಇಲ್ಲಿದೆ.

Coimbatore engineer designs humanoid robot to help out people in banks

ಬ್ಯಾಂಕ್ ಸಿಬ್ಬಂದಿ ಮೇಲಿನ ಹೊರೆ ಇಳಿಸಲು ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕೊಯಮತ್ತೂರು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ಹ್ಯೂಮನೈಡ್ ರೋಬೋಟ್ ಕಂಡುಹಿಡಿದಿದ್ದಾರೆ.

ನೋಟು ನಿಷೇಧದ ನಂತರ ಹಲವು ಮಂದಿ ನಿತ್ಯ ಬ್ಯಾಂಕ್ ಗಳಿಗೆ ಬರುತ್ತಿದ್ದಾರೆ. ಬಂದವರಿಗೆಲ್ಲಾ ಮಾಹಿತಿ ನೀಡಲು ಸಿಬ್ಬಂದಿ ಹೆಚ್ಚು ಶ್ರಮಪಡುತ್ತಿದ್ದಾರೆ. ಇವರ ಶ್ರಮದ ಹೊರೆ ಇಳಿಸಲು ಈ ರೋಬೋಟ್ ಸಹಾಯ ಮಾಡಲಿದೆ.

ಖಾತೆ ತೆರೆಯಲು ಅನುಸರಿಸಬೇಕಾದ ಕ್ರಮಗಳೇನು? ಈಗಾಗಲೇ ಖಾತೆ ಹೊಂದಿದ್ದರೆ, ಆ ಕುರಿತ ಮಾಹಿತಿ ಮತ್ತಿತರರ ಬ್ಯಾಂಕಿಗ್ ವ್ಯವಹರಾಗಳ ಕುರಿತು ಈ ರೋಬೊಟ್ ಮಾಹಿತಿ ನೀಡಲಿದೆ. ಇದು ದೇಶದ 15 ಭಾಷೆಗಳಲ್ಲಿ ಮಾಹಿತಿ ನೀಡುತ್ತದೆ ಎಂದು ರೊಬೋಟ್ ತಯಾರಿಸಿರುವ ವಿಜಯ್ ತಿಳಿಸಿದ್ದಾರೆ.

ಈ ರೋಬೋಟ್ ಗಳನ್ನು ಬ್ಯಾಂಕಿಂಗ್ ವ್ಯವಹಾರಕ್ಕೆ ಬಳಸಿಕೊಂಡಲ್ಲಿ ಸಿಬ್ಬಂದಿ ಮೇಲಿನ ಹೊರೆ ಸಾಕಷ್ಟು ಕಡಿಮೆಯಾಗುತ್ತದೆ. ಮುಂದಿನ ಕ್ರಿಸ್ ಮಸ್ ವೇಳೆಗೆ ಈ ರೋಬೋಟ್ ಬ್ಯಾಂಕ್ ಗಳಲ್ಲಿ ಕಾಣಿಸಿಕೊಳ್ಳಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Coimbatore-based software engineer and designer has come up with a unique creation that could help us deal with the crisis that is over-crowded banks, confusing directions and unhelpful bank employees.
Please Wait while comments are loading...