Breaking News: ದೆಹಲಿ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗೆ 5,000 ರೂಪಾಯಿ

ನವದೆಹಲಿ, ನವೆಂಬರ್ 25: ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಯೊಬ್ಬ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗೆ ತಲಾ 5,000 ರೂಪಾಯಿ ಜಮೆ ಮಾಡುವಂತೆ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ನವದೆಹಲಿಯಲ್ಲಿ ವಾಯು ಮಾಲಿನ್ಯದಿಂದ ಕಟ್ಟಡ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. "ಕಾರ್ಮಿಕರಿಗೆ ಅವರ ಕನಿಷ್ಠ ವೇತನದ ಪ್ರಕಾರ ನಾವು ಅವರ ನಷ್ಟಕ್ಕೆ ಪರಿಹಾರವನ್ನು ಸಹ ನೀಡುತ್ತೇವೆ," ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯ ಗಾಳಿ ಗುಣಮಟ್ಟ ಸೂಚ್ಯಂಕವನ್ನು ಗಮನಿಸಿದ ಸುಪ್ರೀಂ ಕೋರ್ಟ್, ನಿರ್ಮಾಣ ಚಟುವಟಿಕೆಗಳ ಮೇಲಿನ ನಿಷೇಧವನ್ನು ಹೇರುವಂತೆ ಸೂಚನೆ ನೀಡಿತ್ತು. ಕೊಳಾಯಿ ಕೆಲಸ, ಒಳಾಂಗಣ ಅಲಂಕಾರ, ವಿದ್ಯುತ್ ಕೆಲಸ ಮತ್ತು ಮರದ ಕೆಲಸದಿಂದ ಕೂಡಿದ ನಿರ್ಮಾಣ ಚಟುವಟಿಕೆಗಳನ್ನು ಮಾತ್ರ ಮುಂದುವರಿಸಲು ಅನುಮತಿ ನೀಡಿತ್ತು.

CM Kejriwal Given order to deposit Rs 5,000 each in bank accounts of construction workers in Delhi

ಕಟ್ಟಡ ಕಾರ್ಮಿಕರಿಗೆ ನೆರವು ನೀಡಲು ಕೋರ್ಟ್ ಸೂಚನೆ:

ದೆಹಲಿಯಲ್ಲಿ ನಿರ್ಮಾಣ ಚಟುವಟಿಕೆಗಳ ಮೇಲಿನ ನಿಷೇಧದಿಂದ ಉದ್ಯೋಗ ನಷ್ಟವನ್ನು ಅನುಭವಿಸುತ್ತಿರುವ ಕಾರ್ಮಿಕರಿಗೆ ರಾಜ್ಯ ಸರ್ಕಾರ ನೆರವು ನೀಡಬೇಕು. ಅದಕ್ಕಾಗಿ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿ ಕಾಯಿದೆ, 1996ರ ಅಡಿಯಲ್ಲಿ ಸೆಸ್‌ನಂತೆ ಸಂಗ್ರಹಿಸಲಾದ ಹಣವನ್ನು ಬಳಸಿಕೊಳ್ಳುವುದಕ್ಕೆ ನ್ಯಾಯಾಲಯವು ನಿರ್ದೇಶನ ನೀಡಿತ್ತು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿತ್ತು.

ಕಾರ್ಮಿಕರಿಗೆ ಆರ್ಥಿಕ ನೆರವು ನೀಡಲು ಕಟ್ಟಪ್ಪಣೆ:

"ಮಧ್ಯಂತರ ಕ್ರಮವಾಗಿ, ಮತ್ತು ಮುಂದಿನ ಆದೇಶದವರೆಗೆ, ನಾವು ಈ ಕೆಳಗಿನ ಎರಡು ಷರತ್ತುಗಳಿಗೆ ಒಳಪಟ್ಟು ಎನ್‌ಸಿಆರ್‌ನಲ್ಲಿನ ನಿರ್ಮಾಣ ಚಟುವಟಿಕೆಗಳ ಮೇಲೆ ನಿಷೇಧವನ್ನು ಪುನಃ ವಿಧಿಸುತ್ತೇವೆ," ಎಂದು ಬುಧವಾರ ಸುಪ್ರೀಂಕೋರ್ಟ್ ಆದೇಶ ನೀಡಿದೆ.

* ಕೊಳಾಯಿ ಕೆಲಸ, ಒಳಾಂಗಣ ಅಲಂಕಾರ, ವಿದ್ಯುತ್ ಕೆಲಸ ಮತ್ತು ಮರದ ಕೆಲಸದಿಂದ ಕೂಡಿದ ಮಾಲಿನ್ಯರಹಿತ ನಿರ್ಮಾಣ ಚಟುವಟಿಕೆಗಳನ್ನು ಮುಂದುವರಿಸಲು ಅನುಮತಿಸಲಾಗಿದೆ.

* ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕ ಸೆಸ್‌ನಂತೆ ಸಂಗ್ರಹಿಸಿದ ಹಣವನ್ನು ರಾಜ್ಯಗಳು ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸುವ ಅವಧಿಗೆ ಜೀವನಾಧಾರವನ್ನು ಒದಗಿಸಲು ಮತ್ತು ಆಯಾ ವರ್ಗದ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆಯಡಿಯಲ್ಲಿ ಸೂಚಿಸಲಾದ ವೇತನ ಪಾವತಿಸಲು ಬಳಸಬೇಕು.

ಅತ್ಯಂತ ಕಳಪೆಯಿಂದ ಕಳಪೆ ವರ್ಗಕ್ಕೆ ವಾಯು ಗುಣಮಟ್ಟ:

ಕಳೆದ ವಾರ ಇದೇ ಸಮಯದಲ್ಲಿ 403ರಷ್ಟಿದ್ದ ವಾಯು ಗುಣಮಟ್ಟ ಸೂಚ್ಯಂಕವು, ಗುರುವಾರ ಬೆಳಿಗ್ಗೆ ಹೊತ್ತಿಗೆ 290 ಆಗಿದೆ. ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಇದೀಗ ಕಳಪೆ ಹಂತಕ್ಕೆ ತಲುಪಿದೆ. ವಾಯು ಮಾಲಿನ್ಯ ಪ್ರಮಾಣ ಎಷ್ಟಿರಬೇಕು ಎಂಬುದಕ್ಕೆ ಒಂದು ಮಾನದಂಡವಿದೆ. ಅದರ ಪ್ರಕಾರ, 00-50 ಉತ್ತಮ, 51-100 ತೃಪ್ತಿದಾಯಕ, 101-200 ಮಧ್ಯಮ, 201-300 ಕಳಪೆ, 301-400 ಅತಿಕಳಪೆ, 401-500 ಅಪಾಯಕಾರಿ, ಹಾಗೂ 500 ನಂತರ ಅತಿ ಅಪಾಯಕಾರಿ ಎಂದು ಹೇಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+