ಇವಿಎಂ ದೋಷದ ಸುದ್ದಿ ತಳ್ಳಿಹಾಕಿದ ಒ ಪಿ ರಾವತ್
ಇವಿಎಂಗಳಲ್ಲಿ ದೋಷವಿದೆ ಎಂಬ ಸುದ್ದಿ ಸಂಪೂರ್ಣ ಸುಳ್ಳು. ಆದರೆ ವಿವಿಪ್ಯಾಟ್(ಮತ ಖಾತ್ರಿ ಯಂತ್ರ) ಯಂತ್ರಗಳಲ್ಲಿ ದೋಷವಿದ್ದಿದ್ದು ನಿಜ. ಇವನ್ನು ಮೊದಲ ಬಾರಿಗೆ ಉಪಯೋಗಿಸಿದ್ದರಿಂದ ದೋಷವುಂಟಾಗಿದೆ. ಈ ಕುರಿತು ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ರಾಷ್ಟ್ರದ ಒಟ್ಟು 10 ರಾಜ್ಯಗಳ 14 ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ನಿನ್ನೆ ಉಪಚುನಾವಣೆ ನಡೆದಿತ್ತು. ಇವುಗಳಲ್ಲಿ 11 ಮತಗಟ್ಟೆಗಳಲ್ಲಿ ಇವಿಎಂ ನಲ್ಲಿ ದೋಷವಿದೆ ಎಂದು ದೂರಲಾಗಿತ್ತು. ಆದರೆ ಈ ಆರೋಪ ಸತ್ಯಕ್ಕೆ ದೂರವಾದುದು ಎಂದು ಅವರು ಹೇಳಿದ್ದಾರೆ.

ನಿನ್ನೆ ನಡೆದ ಎಲ್ಲಾ ಉಪಚುನಾವಣೆಗಳ ಫಲಿತಾಂಶ ಮೇ 31 ರಂದು ನಡೆಯಲಿದೆ.












Click it and Unblock the Notifications