ಸೇನಾ ಮುಖ್ಯಸ್ಥ ಬಿಪಿನ್ ರಾವತ್ - ರಾಷ್ಟ್ರಪತಿ ಕೋವಿಂದ್ ಭೇಟಿ
ನವದೆಹಲಿ, ಜುಲೈ 27: ಭಾರತದ 14 ನೇ ರಾಷ್ಟ್ರಪತಿಯಾಗಿ ಜುಲೈ 26 ರಂದು ಅಧಿಕಾರ ಸ್ವೀಕರಿಸಿದ ರಾಮ್ ನಾಥ್ ಕೋವಿಂದ್ ಅವರು ಇಂದು(ಜುಲೈ 27) ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರನ್ನು ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಿ ಮಾತುಕತೆ ನಡೆಸಿದರು.
ಕಾರ್ಗಿಲ್ ವಿಜಯ ದಿವಸ(ಜುಲೈ 26)ದ 18ನೇ ವರ್ಷಾಚರಣೆ ಮರುದಿನದ ಈ ಭೇಟಿ ಸೌಜನ್ಯದ ಭೇಟಿಯಾಗಿದೆ.

ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಬಿಪಿನ್ ರಾವತ್ ಅವರ ಜೊತೆ ಸೇನಾ ಕ್ಷೇತ್ರದ ಇತ್ತೀಚಿನ ಬೆಳವಣಿಗೆಯ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications