'ಗೃಹ ಬಂಧನದಲ್ಲಿ ಇರಿಸಿರುವವರಿಗೆ ಸಿನಿಮಾ ಸಿ.ಡಿ., ಜಿಮ್ ಎಲ್ಲ ಇದೆ'

ನವದೆಹಲಿ, ಸೆಪ್ಟೆಂಬರ್ 22: ಕಾಶ್ಮೀರದ ರಾಜಕಾರಣಿಗಳನ್ನು ಕೇಂದ್ರ ಸರ್ಕಾರವು ಹದಿನೆಂಟು ತಿಂಗಳಿಗಿಂತ ಹೆಚ್ಚು ಕಾಲ ಗೃಹ ಬಂಧನದಲ್ಲಿ ಇರಿಸುವುದಿಲ್ಲ. ಮತ್ತು ಅವರು ಬಂಧನದಲ್ಲಿ ಕೂಡ ಇಲ್ಲ. ಅವರು 'ಮನೆಯ ಅತಿಥಿಗಳಂತೆ' ಇದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

"ರಾಜಕೀಯ ನಾಯಕರನ್ನು ವಿಐಪಿ ಬಂಗಲೆಗಳಲ್ಲಿ ಇರಿಸಲಾಗಿದೆ. ಹಾಲಿವುಡ್ ಸಿನಿಮಾಗಳ ಸಿ. ಡಿ. ಗಳನ್ನು ಕೂಡ ಅವರಿಗೆ ನೀಡಿದ್ದೇವೆ. ಜತೆಗೆ ಜಿಮ್ ವ್ಯವಸ್ಥೆ ಮಾಡಿದ್ದೇವೆ. ಅವರು ಗೃಹ ಬಂಧನದಲ್ಲಿ ಇಲ್ಲ. ಅವರು ಮನೆಯ ಅತಿಥಿಗಳು" ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಾಜಕೀಯ ನಾಯಕರನ್ನು ಹದಿನೆಂಟು ತಿಂಗಳಿಗಿಂತ ಹೆಚ್ಚು ಕಾಲ ಗೃಹ ಬಂಧನದಲ್ಲಿ ಕೂಡ ನಾವು ಇರಿಸುವುದಿಲ್ಲ ಎಂದು ಸೇರಿಸಿದ್ದಾರೆ.

Jitendra Singh

ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತಿತರ ನಾಯಕರನ್ನು ಆಗಸ್ಟ್ ಐದನೇ ತಾರೀಕು, ಅಂದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ದಿನದಿಂದಲೂ ಗೃಹ ಬಂಧನದಲ್ಲಿ ಇರಿಸಲಾಗಿದೆ.

ಇದೀಗ ತಿಂಗಳಿಗಿಂತ ಹೆಚ್ಚು ಕಾಲದಿಂದ ಪ್ರತ್ಯೇಕ ಸ್ಥಳಗಳಲ್ಲಿ, ಯಾವುದೇ ಸಂಪರ್ಕ ದೊರೆಯದಂತೆ ರಾಜಕೀಯ ನಾಯಕರನ್ನು ಇರಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನ ಫಾರೂಕ್ ಅಬ್ದುಲ್ಲಾ ಅವರನ್ನು ಕಠಿಣ ಸಾರ್ವಜನಿಕ ಭದ್ರತಾ ಕಾಯ್ದೆ ಅಡಿ ವಶಕ್ಕೆ ಪಡೆಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+