Kartavya Path : ನವದೆಹಲಿಯ ರಾಜಪಥ್ ರಸ್ತೆಗೆ ಕರ್ತವ್ಯಪಥ್ ಎಂದು ಮರುನಾಮಕರಣ
ತಲುಪುತ್ತದೆ. ದೇಶದ ಬ್ರಿಟಿಷ್ ವಸಾಹತುಗಳ ಅವಶೇಷಗಳನ್ನು ಗುರುತಿಸುವ ಉದ್ದೇಶದಿಂದ ಈ ನಿರ್ಧಾರವನ್ನು ಘೋಷಿಸಲಾಗಿದೆ.
ರಾಜಪಥ್ ಮತ್ತು ಸೆಂಟ್ರಲ್ ವಿಸ್ಟಾ ಲಾನ್‌ಗಳನ್ನು ಕರ್ತವ್ಯ ಪಥವೆಂದು ಮರುನಾಮಕರಣ ಮಾಡುವ ಉದ್ದೇಶದಿಂದ ಸೆಪ್ಟೆಂಬರ್ 7ರಂದು ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ)ನ ವಿಶೇಷ ಸಭೆಯನ್ನು ನಡೆಸಲಾಗುವ ಎಂದು ತಿಳಿದು ಬಂದಿದೆ. ನವದೆಹಲಿಯ ನೇತಾಜಿ ಪ್ರತಿಮೆಯಿಂದ ರಾಷ್ಟ್ರಪತಿ ಭವನದವರೆಗಿನ ಸಂಪೂರ್ಣ ಅವೆನ್ಯೂ ಮತ್ತು ಪ್ರದೇಶವನ್ನು ಕಾರ್ತವ್ಯ ಪಥವು ಒಳಗೊಂಡಿದೆ.
ಬ್ರಿಟೀಷ್ ಚಿಹ್ನೆಗಳ ಬಗ್ಗೆ ಉಲ್ಲೇಖಿಸಿದ್ದ ಮೋದಿ:
ಕಳೆದ ಆಗಸ್ಟ್ 15ರಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ವಸಾಹತುಶಾಹಿ ಮತ್ತು ಬ್ರಿಟೀಷ್ ಆಡಳಿತ ಗುರುತುಗಳ ಬಗ್ಗೆ ಉಲ್ಲೇಖಿಸಿದ್ದರು. ವಸಾಹತುಶಾಹಿಗೆ ಸಂಬಂಧಿಸಿದ ಗುರುತುಗಳು ಮತ್ತು ಚಿಹ್ನೆಗಳನ್ನು ರದ್ದುಗೊಳಿಸಬೇಕು ಎಂಬುದನ್ನು ಪ್ರಧಾನಿ ತಮ್ಮ ಭಾಷಣದಲ್ಲಿ ಒತ್ತಿ ಹೇಳಿದ್ದರು.

ಲೋಕ ಕಲ್ಯಾಣ್ ಮಾರ್ಗ್:
ಈ ಹಿಂದೆ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯ ನಿವಾಸವಿರುವ ರೇಸ್ ಕೋರ್ಸ್ ರಸ್ತೆಯ ಹೆಸರನ್ನು ಮರುನಾಮಕರಣ ಮಾಡಲಾಗಿತ್ತು. ರೇಸ್ ಕೋರ್ಸ್ ರಸ್ತೆ ಹೆಸರನ್ನು ಲೋಕ್ ಕಲ್ಯಾಣ್ ಮಾರ್ಗ ಎಂದು ಬದಲಾಯಿಸಲಾಗಿತ್ತು.












Click it and Unblock the Notifications