ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಶಾಂತ್ ಸಾವಿನ ದಿನ ಕಾಣಿಸಿಕೊಂಡಿದ್ದ ಮುಸುಕುಧಾರಿ ಮಹಿಳೆಯ ಗುರುತು ಪತ್ತೆ

|
Google Oneindia Kannada News

ನವದೆಹಲಿ, ಆಗಸ್ಟ್ 17: ತೀವ್ರ ವಿವಾದ ಸೃಷ್ಟಿಸಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಸಿಬಿಐ ತನಿಖೆ ಆರಂಭಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಗಳನ್ನು ಒದಗಿಸಬಲ್ಲ ಸುಶಾಂತ್ ಸಿಂಗ್ ಅವರ ಸೆಲ್ ಫೋನ್ ಅನ್ನು ತಮ್ಮ ವಶಕ್ಕೆ ನೀಡುವಂತೆ ಮುಂಬೈ ಪೊಲೀಸರಿಗೆ ಪತ್ರ ಬರೆಯಲು ಸಿಬಿಐ ಮುಂದಾಗಿದೆ.

ಸುಶಾಂತ್ ಸಿಂಗ್ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂಬ ಬಿಹಾರ ಸರ್ಕಾರದ ಮನವಿಯನ್ನು ಸ್ವೀಕರಿಸಿದ್ದ ಕೇಂದ್ರ ಸರ್ಕಾರ, ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡಿದೆ. ಸುಶಾಂತ್ ಅವರ ಫೋನ್‌ನಲ್ಲಿರುವ ಅಂಶಗಳನ್ನು ಪರಿಶೀಲಿಸಲು ಬಯಸಿರುವುದಾಗಿ ಸಿಬಿಐ ತಿಳಿಸಿದೆ.

ಸುಶಾಂತ್ ಸಾವಿನ ದಿನ ಕಾಣಿಸಿಕೊಂಡ ಮುಸುಕುಧಾರಿ ಮಹಿಳೆ ಯಾರು?ಸುಶಾಂತ್ ಸಾವಿನ ದಿನ ಕಾಣಿಸಿಕೊಂಡ ಮುಸುಕುಧಾರಿ ಮಹಿಳೆ ಯಾರು?

ಸುಶಾಂತ್ ಅವರ ವಾಟ್ಸಾಪ್ ಸಂದೇಶಗಳು ಮಹತ್ವದ ವಿವರಗಳನ್ನು ನೀಡಬಹುದು. ಹಾಗೆಯೇ ಅವರ ಹಣಕಾಸು ವ್ಯವಹಾರಗಳ ಬಗ್ಗೆಯೂ ಮಾಹಿತಿಗಳನ್ನು ನೀಡುವ ನಿರೀಕ್ಷೆಯಿದೆ. ಸುಶಾಂತ್ ಅವರ ಫೋನ್ ಅನ್ನು ಪರಿಶೀಲಿಸುವುದು ಈ ಪ್ರಕರಣದಲ್ಲಿ ಅತಿ ಮುಖ್ಯವಾದ ಅಂಶವಾಗಿದೆ. ಅವರ ಸಾವಿನ ಸುತ್ತಮುತ್ತಲಿನ ಅನೇಕ ಸಂಗತಿಗಳು ಫೋನ್‌ನಿಂದಲೇ ಬಹಿರಂಗವಾಗಬಹುದು ಎಂದು ಸಿಬಿಐ ತಿಳಿಸಿದೆ. ಮುಂದೆ ಓದಿ...

ಸುಶಾಂತ್‌ಗೆ ಮಾನಸಿಕ ಚಿಕಿತ್ಸೆ

ಸುಶಾಂತ್‌ಗೆ ಮಾನಸಿಕ ಚಿಕಿತ್ಸೆ

ಮುಂಬೈ ಪೊಲೀಸರು ಮತ್ತು ಸಿಬಿಐ ಅಲ್ಲದೆ, ಜಾರಿ ನಿರ್ದೇಶನಾಲಯ ಕೂಡ ಸುಶಾಂತ್ ಸಾವಿನ ಹಿಂದೆ ಹಣ ವರ್ಗಾವಣೆಯ ಕಾರಣಗಳು ಇರಬಹುದೇ ಎಂದು ತನಿಖೆ ನಡೆಸುತ್ತಿವೆ.

ಸುಶಾಂತ್ ಸಿಂಗ್ ಅವರಿಗೆ ಆಧ್ಯಾತ್ಮಿಕ ಚಿಕಿತ್ಸಕರೊಬ್ಬರು ಚಿಕಿತ್ಸೆ ನೀಡುತ್ತಿದ್ದರು ಎನ್ನಲಾಗಿದೆ. ಮೋಹನ್ ಸದಾಶಿವ್ ಜೋಶಿ ಎಂಬುವವರು ಸುಶಾಂತ್‌ಗೆ ಚಿಕಿತ್ಸೆ ನೀಡುವ ಸಂಬಂಧ ರಿಯಾ ಚಕ್ರವರ್ತಿ ತಮ್ಮನ್ನು ಸಂಪರ್ಕಿಸಿದ್ದರು ಎಂದು ತಿಳಿಸಿದ್ದಾರೆ.

ಸುಶಾಂತ್ ಏನೂ ಹೇಳಿರಲಿಲ್ಲ

ಸುಶಾಂತ್ ಏನೂ ಹೇಳಿರಲಿಲ್ಲ

ಕಳೆದ ನವೆಂಬರ್‌ನಲ್ಲಿ ಸುಶಾಂತ್ ಅವರನ್ನು ಭೇಟಿ ಮಾಡಿದ್ದೆ. ಎಲ್ಲ ಮಾತುಕತೆ ವ್ಯವಹಾರಗಳನ್ನು ರಿಯಾ ಚಕ್ರವರ್ತಿಯೇ ನಿಭಾಯಿಸಿದ್ದರು. ಸುಶಾಂತ್ ತಮ್ಮ ಸಮಸ್ಯೆಗಳ ಬಗ್ಗೆ ಯಾವ ಮಾತೂ ಆಡಿರಲಿಲ್ಲ. ಮುಂಬೈ ಪೊಲೀಸರು ಹೇಳಿಕೆ ದಾಖಲಿಸುವಂತೆ ಕರೆದಿದ್ದರು. ಆದರೆ ವಯಸ್ಸು ಹೆಚ್ಚಾಗಿರುವುದರಿಂದ ಆರೋಗ್ಯದ ದೃಷ್ಟಿಯಿಂದ ಪೊಲೀಸ್ ಠಾಣೆಗೆ ಹೋಗಿಲ್ಲ ಎಂದು ಅವರು ಹೇಳಿದ್ದಾರೆ.

ಸುಶಾಂತ್ ಕೇಸ್: ತಿರುವು ನೀಡುತ್ತಿದೆ ಆಂಬ್ಯುಲೆನ್ಸ್ ಸಿಬ್ಬಂದಿ ಹೇಳಿಕೆಸುಶಾಂತ್ ಕೇಸ್: ತಿರುವು ನೀಡುತ್ತಿದೆ ಆಂಬ್ಯುಲೆನ್ಸ್ ಸಿಬ್ಬಂದಿ ಹೇಳಿಕೆ

ಶೌವಿಕ್ ಚಕ್ರವರ್ತಿಯ ಪ್ರೇಯಸಿ

ಶೌವಿಕ್ ಚಕ್ರವರ್ತಿಯ ಪ್ರೇಯಸಿ

ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟ ಜೂನ್ 14ರಂದು ಸುಶಾಂತ್ ಕಟ್ಟಡಕ್ಕೆ ಮಾಸ್ಕ್ ಧರಿಸಿ ಪ್ರವೇಶಿಸಿದ್ದ ನಿಗೂಢ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಆಕೆ ಯಾರು ಎನ್ನುವುದು ಗೊತ್ತಾಗಿರಲಿಲ್ಲ. ಮುಂಬೈ ಪೊಲೀಸರ ಮೂಲಗಳು, ಅದು ರಿಯಾ ಚಕ್ರವರ್ತಿಯ ಸಹೋದರ ಶೌವಿಕ್ ಚಕ್ರವರ್ತಿಯ ಪ್ರೇಯಸಿ ಜಮೀಲಾ ಎಂದು ಊಹಿಸಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಅವಕಾಶ ನೀಡದ ಪೊಲೀಸರು

ಅವಕಾಶ ನೀಡದ ಪೊಲೀಸರು

ಸುಶಾಂತ್ ಸಾವಿನ ಸಂಗತಿ ತಿಳಿದ ಬಳಿಕ ಜಮೀಲಾ ತಮ್ಮ ಸ್ನೇಹಿತರಾದ ಪ್ರಿಯಾಂಕಾ ಖೆಮಾನಿ ಮತ್ತು ಮಹೇಶ್ ಶೆಟ್ಟಿ ಜತೆಗೆ ಅಲ್ಲಿಗೆ ಬಂದಿದ್ದರು. ಆದರೆ ಸ್ಥಳದಲ್ಲಿದ್ದ ಪೊಲೀಸರ ತಂಡ ಒಳಗೆ ಪ್ರವೇಶಿಸಲು ಅವರಿಗೆ ಅವಕಾಶ ನೀಡಿರಲಿಲ್ಲ. ಮನೆಯ ಸಿಬ್ಬಂದಿ ಜತೆ ಮಾತನಾಡಿ ಜಮೀಲಾ ವಾಪಸಾಗಿದ್ದರು ಎಂದು ಹೇಳಲಾಗಿದೆ.

English summary
CBI to write to the Mumbai police for custody of the Sushant Singh Rajput's cellphone for investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X