ಲಾಲೂ ಪುತ್ರಿ ಮಿಸಾ ಭಾರತಿಗೆ ಸಿಬಿಐ ಕೋರ್ಟ್ ನಿಂದ ಜಾಮೀನು
ನವದೆಹಲಿ, ಮಾರ್ಚ್ 05: ಸುಮಾರು ಎಂಟು ಸಾವಿರ ಕೋಟಿ ರೂ. ವಂಚನೆ ಆರೋಪ (money laundering) ಎದುರಿಸುತ್ತಿದ್ದ ಲಾಲೂ ಪ್ರಸಾದ್ ಯಾದವ್ ಪುತ್ರಿ ಮಿಸಾ ಭಾರತಿ ಮತ್ತು ಅವರ ಪತಿ ಶೈಲೇಶ್ ಕುಮಾರ್ ಅವರಿಗೆ ಸಿಬಿಐನ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಸಂಸದೆಯೂ ಆಗಿರುವ ಮಿಸಾ ಭಾರತಿ ಅವರ ಕಚೇರಿ ಮತ್ತು ಮನೆಗಳ ಮೇಲೆ ಕಳೆದ ವರ್ಷ ಆದಾಯ ತೆರಿಗೆ ಇಲಾಖೆಗಳು ದಾಳಿ ನಡೆಸಿತ್ತು. ಅವರ ವಿರುದ್ಧ 1000 ಕೋಟಿ ರೂ.ಗೂ ಅಧಿಕ ಮೌಲ್ಯದ ಬೇನಾಮಿ ಆಸ್ತಿ ಇದೆ ಎಂದು ಶಂಕಿಸಲಾಗಿತ್ತು.
ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಪತ್ನಿ ರಾಬ್ಡಿ ದೇವಿ ಅವರ ಮಗಳಾದ ಮಿಸಾ ಭಾರತಿ ಅವರ ವಿರುದ್ಧ ಹಲವು ಅವ್ಯವಹಾರ ಪ್ರಕರಣಗಳು ದಾಖಲಾಗಿವೆ.













Click it and Unblock the Notifications