Get Updates
Get notified of breaking news, exclusive insights, and must-see stories!

ಮಗಳ ಮದುವೆಗೆ ಪುಕ್ಕಟೆ ಸೇವೆ ಪಡೆದಿದ್ದ ಸಿಬಿಐನ ರಾಕೇಶ್ ಅಸ್ಥಾನಾ

ನವದೆಹಲಿ, ಅಕ್ಟೋಬರ್ 26: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ವಿರುದ್ಧ ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪವಿದೆ. ಲಂಚ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರಾಕೇಶ್ ಅಸ್ಥಾನಾ, ಎರಡು ವರ್ಷದ ಹಿಂದೆ ಗುಜರಾತ್‌ನ ವಡೋದರಾದಲ್ಲಿ ನಡೆದ ತಮ್ಮ ಮಗಳ ಮದುವೆಯಲ್ಲಿಯೂ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಸಂಗತಿ ಬಹಿರಂಗವಾಗಿದೆ.

ಹೀಗಾಗಿ ರಾಕೇಶ್ ಅಸ್ಥಾನಾ ವಿರುದ್ಧ ನಡೆಯುತ್ತಿರುವ ತನಿಖೆಯಲ್ಲಿ 2016ರಲ್ಲಿ ನಡೆದ ಅವರ ಮಗಳ ಮದುವೆ ಕಾರ್ಯಕ್ರಮವೂ ಒಳಗೊಂಡಿದೆ.

ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿರುವ ರಾಕೇಶ್ ಅಸ್ಥಾನಾ, ಮಗಳ ವಿವಾಹ ಸಂದರ್ಭದಲ್ಲಿ ಅನೇಕ ಪುಕ್ಕಟೆ ಸೇವೆಗಳನ್ನು ಪಡೆದುಕೊಂಡಿರುವುದು ಸಿಬಿಐ ವಶಪಡಿಸಿಕೊಂಡಿರುವ ದಾಖಲೆಗಳಿಂದ ತಿಳಿದುಬಂದಿದೆ.

ಮದುವೆಯ ಸ್ಥಳ, ಅತಿಥಿಗಳಿಗಾಗಿ ಮಾಡಿದ ಹೋಟೆಲ್ ಬುಕ್ಕಿಂಗ್ ಮತ್ತು ಸಂಗೀತ ಕಾರ್ಯಕ್ರಮಕ್ಕೆ ಪೂರೈಸಿದ ಆಹಾರಗಳ ಸೇವೆಗಳನ್ನು ಅಸ್ಥಾನಾ ಬಹುತೇಕ ಬಿಟ್ಟಿಯಾಗಿ ಪಡೆದುಕೊಂಡಿದ್ದಾರೆ.

ಕೆಲವು ಸೇವೆಗಳನ್ನು ಮಾಮೂಲಿ ದರಕ್ಕೆ ಒದಗಿಸಲಾಗಿದ್ದು, ಅವುಗಳನ್ನು 'ಕಾಂಪ್ಲಿಮೆಂಟರಿ ಸೇವೆ'ಯನ್ನಾಗಿ ನೀಡಿಲ್ಲ. ಹೋಟೆಲ್‌ನಲ್ಲಿ ತಂಗಲು ಮಾಡಿದ ಬುಕ್ಕಿಂಗ್‌ಗೆ ಕೇವಲ 175 ರೂ ಪಡೆದುಕೊಳ್ಳಲಾಗಿದೆ.

ಕಮಿಷನರ್ ಆಗಿದ್ದ ಅಸ್ಥಾನಾ

ಕಮಿಷನರ್ ಆಗಿದ್ದ ಅಸ್ಥಾನಾ

2016ರ ನವೆಂಬರ್ 24 ಮತ್ತು 25ರಂದು ಮದುವೆ ನಡೆದಿತ್ತು. ಅಸ್ಥಾನಾ ಅವರು ವಡೋದರಾದಲ್ಲಿ 2008-2011ರ ಅವಧಿಯಲ್ಲಿ ಪೊಲೀಸ್ ಕಮಿಷನರ್ ಆಗಿ ಕಾರ್ಯ ನಿರ್ವಹಿಸಿದ್ದರು. 2011-2016ರ ಆರಂಭದವರೆಗೂ ಅಸ್ಥಾನಾ ಸೂರತ್‌ನ ಕಮಿಷನರ್ ಆಗಿದ್ದರು. ಮಗಳ ಮದುವೆಯ ಸಂದರ್ಭದಲ್ಲಿ ಅವರನ್ನು ಸಿಬಿಐಗೆ ಬಡ್ತಿ ನೀಡಲಾಗಿತ್ತು.

ಸ್ಟೆರ್ಲಿಂಗ್ ಬಯೋಟೆಕ್ ಸಂಸ್ಥೆಯ ನೆರವು

ಸ್ಟೆರ್ಲಿಂಗ್ ಬಯೋಟೆಕ್ ಸಂಸ್ಥೆಯ ನೆರವು

ನ. 24ರಂದು ನಡೆದ ಸಂಗೀತ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಎರಡು ಒಪ್ಪಂದಗಳ ದಾಖಲೆಯನ್ನು ಸಿಬಿಐ ವಶಪಡಿಸಿಕೊಂಡಿದೆ. ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಸ್ಟೆರ್ಲಿಂಗ್ ಬಯೋಟೆಕ್ ಕಂಪೆನಿಯ ನಿರ್ದೇಶಕರಲ್ಲಿ ಒಬ್ಬರಾದ ಚೇತನ್ ಸಂದೇಸರ ಅವರ ಮಾಲೀಕತ್ವದ ಫಾರ್ಮ್ ಹೌಸ್‌ನಲ್ಲಿ ಸಂಗೀತ ಕಾರ್ಯಕ್ರಮ ನಡೆದಿತ್ತು.

ಪುಕ್ಕಟೆ ಆಹಾರ ಪೂರೈಕೆ

ಪುಕ್ಕಟೆ ಆಹಾರ ಪೂರೈಕೆ

ಹೋಟೆಲ್ ಎಕ್ಸ್‌ಪ್ರೆಸ್ ಟವರ್ಸ್ ಎಂಬ ಹೋಟೆಲ್‌ನಿಂದ ಆಹಾರ ಪೂರೈಕೆ ಮಾಡಲಾಗಿತ್ತು. ಈ ಸೇವೆಗೆ ಒಂದೂ ಪೈಸೆ ಹಣವನ್ನೂ ತೆಗೆದುಕೊಂಡಿರಲಿಲ್ಲ.

ನಾವು ಕಾರ್ಯಕ್ರಮಕ್ಕೆ ಆಹಾರ ಪೂರೈಕೆಯನ್ನು ಮಾತ್ರ ಮಾಡುತ್ತಿದ್ದೇವೆ. ಅದರ ಹೊರತಾಗಿ ಬೇರೆ ಯಾವುದೇ ಸೇವೆ ನೀಡುತ್ತಿಲ್ಲ. ಈ ಕಾರ್ಯಕ್ರಮವು ಕಾಂಪ್ಲಿಮೆಂಟರಿ ಆಧಾರದಲ್ಲಿ ನಡೆದಿದ್ದು, ಅದಕ್ಕಾಗಿ ಯಾವುದೇ ಬಿಲ್ ಪಡೆದುಕೊಂಡಿಲ್ಲ ಎಂದು ಹೋಟೆಲ್, ಸಿಬಿಐಗೆ ನೀಡಿರುವ ದಾಖಲೆಯಲ್ಲಿ ತಿಳಿಸಿದೆ.

ಮದುವೆಗೆ ಉಚಿತ ಸ್ಥಳ

ಮದುವೆಗೆ ಉಚಿತ ಸ್ಥಳ

ಅಸ್ಥಾನಾ ಅವರ ಮಗಳ ಮದುವೆಯು ಬರೋಡಾ ರಾಜಮನೆತನಕ್ಕೆ ಸೇರಿದ ಲಕ್ಷ್ಮಿ ವಿಲಾಸ ಪ್ಯಾಲೇಸ್‌ನಲ್ಲಿ ನಡೆದಿತ್ತು. ಮದುವೆಯ ಸ್ಥಳವನ್ನು ಕಾಂಪ್ಲಿಮೆಂಟರಿಯಾಗಿ ನೀಡಿದ್ದಾಗಿ ಸಿಬಿಐಗೆ ಮಾಹಿತಿ ನೀಡಲಾಗಿದೆ.

ಸನ್ ಸಿಟಿ ಕ್ಲಬ್ ಆಂಡ್ ರೆಸಾರ್ಟ್‌ ಎಂಬ ಒಂದು ಹೋಟೆಲ್ ಅಸ್ಥಾನಾ ಅವರ ಕುಟುಂಬಕ್ಕೆ ಉಚಿತವಾಗಿ 25 ಕೊಠಡಿಗಳನ್ನು ನೀಡಿತ್ತು. ನಮ್ಮದು ಹೊಸ ರೆಸಾರ್ಟ್ ಆಗಿತ್ತು. ಅಧಿಕೃತವಾಗಿ ರೆಸಾರ್ಟ್ ಆರಂಭಿಸುವ ಮುನ್ನವೇ ಅಸ್ಥಾನಾ ಅವರಂತಹ ಪ್ರತಿಷ್ಠಿತ ಅತಿಥಿಗೆ ಸೇವೆ ಒದಗಿಸುವುದು ನಮ್ಮ ಗೌರವ ಎಂಬ ಕಾರಣಕ್ಕೆ ಅವರಿಗೆ ಕಾಂಪ್ಲಿಮೆಂಟರಿಯಾಗಿ ಸೌಲಭ್ಯ ಒದಗಿಸಲಾಯಿತು ಎಂದು ಕ್ಲಬ್ ತಿಳಿಸಿದೆ.

ಕೇವಲ 175 ರೂ ದರ

ಕೇವಲ 175 ರೂ ದರ

ಎಕ್ಸ್‌ಪ್ರೆಸ್ ಹೋಟೆಲ್ ಟವರ್‌ನಲ್ಲಿ 19 ರೂಂಗಳನ್ನು ಬುಕ್ ಮಾಡಲಾಗಿತ್ತು. ಅಸ್ಥಾನಾ ಅವರ ಕುಟುಂಬದ ಅತಿಥಿಗಳಿಗಾಗಿ ಒಂದು ರಾತ್ರಿಗೆ ಕೇವಲ 175 ರೂ.ಗಳಿಗೆ ಕೊಠಡಿ ನೀಡಲಾಗಿತ್ತು. ಅದೇ ವೇಳೆ ಮದುವೆ ಸಂಬಂಧಿಸದ ಇತರೆ ಗ್ರಾಹಕರಿಗೆ ಒಂದು ರೂಂಗೆ 2,900-3,200 ರೂ.ಗೆ ಕೊಠಡಿ ನೀಡಿರುವುದು ಪತ್ತೆಯಾಗಿದೆ.

ಹಣ ಪಾವತಿಸಿದ್ದು ಸ್ಟರ್ಲಿಂಗ್ ಬಯೋಟೆಕ್

ಹಣ ಪಾವತಿಸಿದ್ದು ಸ್ಟರ್ಲಿಂಗ್ ಬಯೋಟೆಕ್

ರಾಕೇಶ್ ಅಸ್ಥಾನಾ ಮತ್ತು ಅವರ ಕುಟುಂಬ ವಿಮಾನ ಹಾಗೂ ವಾಹನಗಳಲ್ಲಿ ಓಡಾಟ ನಡೆಸಿರುವುದರ ದಾಖಲೆಗಳನ್ನು ಸಹ ಸಿಬಿಐ ವಶಕ್ಕೆ ತೆಗೆದುಕೊಂಡಿದೆ. ಟ್ರಾವೆಲ್ ಸಲ್ಯೂಷನ್ಸ್ ಎಂಬ ಕಂಪೆನಿ ಎಲ್ಲ ಓಡಾಟದ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಅದಕ್ಕೆ ಹಣವನ್ನು ಸ್ಟರ್ಲಿಂಗ್ ಬಯೋಟೆಕ್ ಸಂಸ್ಥೆ ಪಾವತಿಸಿದೆ.

ಮದುವೆಗೆ ಸಂಬಂಧಿಸಿದ ಕೆಲವು ಸೇವೆಗಳ ಹಣವನ್ನು ಚೆಕ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿ ಮಾಡಲಾಗಿದೆ. ಅವುಗಳಿಗೆ ಸಂಬಂಧಿಸಿದ ದಾಖಲೆಗಳು ತಕ್ಷಣಕ್ಕೆ ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+