ದೆಹಲಿ ಆರೋಗ್ಯ ಇಲಾಖೆ ಮಾಜಿ ಕಾರ್ಯದರ್ಶಿಗೆ ಸಿಬಿಐ ಶಾಕ್
10 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವದೆಹಲಿಯ ಆರೋಗ್ಯ ಇಲಾಖೆ ಮಾಜಿ ಕಾರ್ಯದರ್ಶಿ ಡಾ.ತರುಣ್ ಸೀಮ್ ಕಚೇರಿಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನವದೆಹಲಿ, ಮೇ 04: 10 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವದೆಹಲಿಯ ಆರೋಗ್ಯ ಇಲಾಖೆ ಮಾಜಿ ಕಾರ್ಯದರ್ಶಿ ಡಾ.ತರುಣ್ ಸೀಮ್ ಕಚೇರಿಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದೆಹಲಿ ಸಚಿವಾಲಯ ಸೇರಿದಂತೆ ಒಟ್ಟು ಆರು ಕಡೆ ಸಿಬಿಐ ದಾಳಿ ನಡೆದಿದ್ದು, ಮೊದಲು ಅರವಿಂದ್ ಕೇಜ್ರಿವಾಲ್ ಸಚಿವಾಲಯದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಕಚೇರಿ ಮೇಲೆ ದಾಳಿ ನಡೆದಿದೆ ಎಂದು ವದಂತಿಯಾಗಿತ್ತು.[ಎಎಪಿಯಲ್ಲಿನ ಬಿಕ್ಕಟ್ಟಿಗೆ ತೆರೆ: ಪಕ್ಷ ತೊರೆಯುವುದಿಲ್ಲ ಎಂದ ವಿಶ್ವಾಸ್]

ಆದರೆ 10 ಕೋಟಿ ರೂ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ದೆಹಲಿಯ ಆರೋಗ್ಯ ಇಲಾಖೆ ಮಾಜಿ ಕಾರ್ಯದರ್ಶಿ ಡಾ.ತರುಣ್ ಸೀಮ್ ಕಚೇರಿಯ ಮೇಲೆ ದಾಳಿ ನಡೆಸಲಾಗಿದ್ದು, ಇದಕ್ಕೂ ಸತ್ಯೇಂದ್ರ ಜೈನ್ ಗೂ ಯಾವುದೇ ಸಂಬಂಧಿವಿಲ್ಲ ಎಂದು ಸಿಬಿಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications