ವಂದೇ ಭಾರತ್ ಎಕ್ಸ್‌ಪ್ರೆಸ್ ಸುತ್ತಲೂ ಕ್ಯಾಮರಾ, ಕಲ್ಲೆಸೆಯುವವರ ಬಗ್ಗೆ ತೀವ್ರ ನಿಗಾ
ನವದೆಹಲಿ, ಏ.6: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ಎಸೆಯುವವರ ಬಗ್ಗೆ ನಿಗಾ ಇಡಲು ಸುತ್ತಲೂ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ವಂದೇ ಭಾರತ್ ರೈಲನ್ನು ದೇಶೀಯವಾಗಿ ಅಭಿವೃದ್ಧಿಗೊಳಿಸಲಾಗಿದೆ. ಸಂಚಾರ ಆರಂಭದಿಂದಲೂ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸುತ್ತಿದ್ದಾರೆ. ಇದರಿಂದಾಗಿ ಇದುವರೆಗೆ ರೈಲಿನ 12 ಕಿಟಕಿಗಳ ಗಾಜು ಒಡೆದಿದ್ದು ಅವುಗಳನ್ನು ಬದಲಾಯಿಸಲಾಗಿದೆ.
ಕಲ್ಲು ತೂರಾಟ ನಡೆಸಿದವರ ಗುರುತು ಪತ್ತೆಯಾಗಿರಲಿಲ್ಲ. ಹಾಗಾಗಿ ಈಗ ರೈಲಿನ ಸುತ್ತಲೂ ಕ್ಯಾಮರಾ ಅಳವಡಿಸಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ತಿಂಗಳು ಪ್ರಾಯೋಗಿಕವಾಗಿ ವಂದೇ ಭಾರತ್ ಎಕ್ಸ್ಪ್ರೆಸ್ನ ಹಿಂಭಾಗದಲ್ಲಿ 2 ಮತ್ತು ಮುಂಭಾಗದಲ್ಲಿ 2 ಒಟ್ಟು 4 ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಕ್ಯಾಮರಾ ಅಳವಡಿಸಿದ ನಂತರ ಮಾರ್ಚ್ 17 ರಂದು ರೈಲಿನ ಮೇಲೆ ಮತ್ತೆ ಕಲ್ಲು ತೂರಾಟ ನಡೆದಿತ್ತು.
ರಾಜ್ಯದ ಸಂಸದರಲ್ಲಿ ಯಾರ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ?
ರೈಲಿನ ಮೇಲೆ ಮೊದಲ ಬಾರಿಗೆ ಕಲ್ಲು ತೂರಾಟ ನಡೆದಾಗ ರೈಲ್ವೆ ಅಧಿಕಾರಿಗಳು ರೈಲು ಹಳಿಯ ಸಮೀಪದ ಸ್ಲಮ್ ಮಕ್ಕಳು ಮತ್ತು ಜನರಿಗೆ ಕಲ್ಲು ತೂರದಂತೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಆದರೂ ಕಲ್ಲು ತೂರಾಟ ಪ್ರಕರಣಗಳು ಕಡಿಮೆಯಾಗಿರಲಿಲ್ಲ.












Click it and Unblock the Notifications