ಬಜೆಟ್ 2019: ದೇಶದಾದ್ಯಂತ ಪ್ರಯಾಣಕ್ಕೆ ಒಂದೇ ಕಾರ್ಡ್
ನವದೆಹಲಿ, ಜುಲೈ 05: ದೇಶದಾದ್ಯಂತ ಪ್ರಯಾಣಕ್ಕೆ ಕೇವಲ ಒಂದೇ ಕಾರ್ಡ್ ಬಳಕೆ ಬಗ್ಗೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.
ನ್ಯಾಷನಲ್ ಟ್ರಾವಲ್ ಕಾರ್ಡ್ (ರಾಷ್ಟ್ರೀಯ ಪ್ರಯಾಣ ಕಾರ್ಡ್) ಒಂದನ್ನೇ ಬಸ್ಸು, ರೈಲು ಇನ್ನೂ ಕೆಲವು ಸಾರ್ವಜನಿಕ ಸಾರಿಗೆಗಳಿಗೆ ಬಳಸಬಹುದಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಎಂದು ಕರೆಯಲಾಗುವ ಇದನ್ನು ರುಪೇ ಕಾರ್ಡ್‌ನಿಂದ ರೀಚಾರ್ಜ್ ಮಾಡಬಹುದಾಗಿದೆ. ಯಾವುದೇ ಸಾರ್ವಜನಿಕ ಸಾರಿಗೆ ಪ್ರಯಾಣಕ್ಕೆ ಕಾರ್ಡ್ ಅನ್ನು ಬಳಸಬಹುದಾಗಿದೆ.

ರೈಲು, ಬಸ್ಸು, ಮೆಟ್ರೊ ಮಾತ್ರವೇ ಅಲ್ಲದೆ, ಪಾರ್ಕಿಂಗ್ ಫೀ, ಟೋಲ್ ಫೀ ನೀಡಲು ಇನ್ನೂ ಹಲವು ಉದ್ದೇಶಗಳಿಗೆ ಇದನ್ನು ಬಳಸಬಹುದಾಗಿದೆ. ಇದನ್ನು 'ಒಂದು ದೇಶ ಒಂದು ಕಾರ್ಡ್' ಎಂತಲೂ ಕರೆಯಲಾಗುತ್ತಿದೆ.












Click it and Unblock the Notifications