ಮೋದಿ ಘೋಷಣೆ ಮಾಡಿದ್ದು ಐತಿಹಾಸಿಕ ಪ್ಯಾಕೇಜ್: ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ

ದೆಹಲಿ, ಮೇ 13: ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿರುವ 20 ಲಕ್ಷ ಕೋಟಿಯ ಆರ್ಥಿಕ ಪ್ಯಾಕೇಜ್ ಐತಿಹಾಸಿಕವಾಗಿದ್ದು, ಇದು ಭಾರತವನ್ನು ಬಲಿಷ್ಠ ಮತ್ತು ಸ್ವಾವಲಂಬನೆಯಾಗಿ ಮಾಡಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಬುಧವಾರ ಹೇಳಿದ್ದಾರೆ.

Recommended Video

      ಇದು ಬರಿ ಕೊರೊನ ವಿರುದ್ಧ ಹೊರಡುವ ಪ್ಯಾಕೇಜ್ ಅಲ್ಲ ಎಂದ ಬಿಜೆಪಿ ಅಧ್ಯಕ್ಷ..! | J P Nadda

      ''ಆತ್ಮ ನಿರ್ಭರ್ ಭಾರತ್ ಅಭಿಯಾನ್' ಅಡಿಯಲ್ಲಿ ಮೋದಿ ಘೋಷಣೆ ಮಾಡಿರುವ 20 ಲಕ್ಷ ಕೋಟಿಯ ಆರ್ಥಿಕ ಪ್ಯಾಕೇಜ್ ಕೇವಲ ಕೊವಿಡ್ ವಿರುದ್ಧ ಹೋರಾಟ ಮಾಡಲು ಮಾತ್ರವಲ್ಲ, ದೇಶವನ್ನು ಬಲಿಷ್ಠ ಮತ್ತು ಸ್ವಾವಲಂಬನೆಯಾಗಲು ಸಹಕಾರಿಯಾಗಲಿದೆ'' ಎಂದು ಜೆಪಿ ನಡ್ಡಾ ಅಭಿಪ್ರಾಯ ಪಟ್ಟಿದ್ದಾರೆ.

      ''ಈ ಪ್ಯಾಕೇಜ್‌ನಲ್ಲಿ ದೇಶದ ಬಡ ಜನರು, ಕಾರ್ಮಿಕರು ಮತ್ತು ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಮಧ್ಯಮ ವರ್ಗದವನ್ನು ಸಹ ಪರಿಗಣಿಸಲಾಗಿದೆ, ಈ ಪ್ಯಾಕೇಜ್ ಐತಿಹಾಸಿಕವಾಗಿದೆ ಮತ್ತು ಭಾರತಕ್ಕೆ ಆರ್ಥಿಕ ಜಿಗಿತ ಕಾಣಲು ನೆರವಾಗಲಿದೆ'' ಎಂದಿದ್ದಾರೆ.

      BJP President JP Nadda Says 20 Crore Economic Package Will Make India Strong

      ಅಂದ್ಹಾಗೆ, ಪ್ರಧಾನಿ ಮೋದಿ ನಿನ್ನೆ ರಾತ್ರಿ 8 ಗಂಟೆಗೆ ಮಾಡಿದ ಭಾಷಣದಲ್ಲಿ 20 ಕೋಟಿಯ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದರು. ಈ ಸಂಬಂಧ ಆರ್ಥಿಕ ಸಚಿವರು ರೂಪುರೇಷೆ ಸಿದ್ಧಪಡಿಸಿ ನಿಮ್ಮ ಮುಂದೆ ಇಡಲಿದ್ದಾರೆ ಎಂದು ಹೇಳಿದ್ದರು.

      ಮೋದಿ ಹೇಳಿದಂತೆ ಇಂದು ಸಂಜೆ 4 ಗಂಟೆಗೆ ವಿತ್ತೆ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ಮಾಡಲಿದ್ದಾರೆ. 20 ಲಕ್ಷ ಕೋಟಿ ಪ್ಯಾಕೇಜ್‌ಗೆ ಸಂಬಂಧಿಸಿದಂತೆ ಏನೆಲ್ಲಾ ಸೌಲಭ್ಯಗಳು ಸಿಗಲಿದೆ ಎಂದು ಪ್ರಕಟ ಮಾಡಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+