ಕೊರೊನಾ: ಬಿಜೆಪಿ ಸಂಸದ ಸುರೇಶ್ ಪ್ರಭುಗೆ ಗೃಹ ಬಂಧನ
ನವದೆಹಲಿ, ಮಾರ್ಚ್ 18: ಸೌದಿ ಅರೇಬಿಯಾದಿಂದ ವಾಪಸಾಗಿರುವ ಬಿಜೆಪಿ ಸಂಸದ ಸುರೇಶ್ ಪ್ರಭು ಅವರು ಸ್ವತಃ ಗೃಹ ಬಂಧನದಲ್ಲಿರುವುದಾಗಿ ತಿಳಿಸಿದ್ದಾರೆ.
ಕೊರೊನಾ ವೈರಸ್ ಇಡೀ ವಿಶ್ವಾದ್ಯಂತ ಭಯ ಹುಟ್ಟಿಸುತ್ತಿರುವ ಈ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದೇಶದಿಂದ ಬರುವವರೆಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಹಾಗೆಯೇ ಸೌದಿಯಿಂದ ಹಿಂದಿರುಗಿರುವ ಬಿಜೆಪಿ ಸಂಸದ ಸುರೇಶ್ ಪ್ರಭುಗೃಹ ದಿಗ್ಬಂಧನದಲ್ಲಿರಲು ನಿರ್ಧರಿಸಿದ್ದಾರೆ.ಸೌದಿಯಲ್ಲಿ ನಡೆದ ಜಿ20 ಶೆರ್ಪಾ ಸಭೆಯಲ್ಲಿ ಅವರು ಪಾಲ್ಗೊಂಡಿದ್ದರು. ಮುಂದಿನ 14 ದಿನಗಳ ಕಾಲ ಮನೆಯಲ್ಲೇ ಇರುವುದಾಗಿ ತಿಳಿಸಿದ್ದಾರೆ.

ಮಾಜಿ ವಿತ್ತ ಸಚಿವ ಸುರೇಶ್ ಪ್ರಭು ಅವರನ್ನು ಸೌದಿ ಅರೇಬಿಯಾದಲ್ಲಿ ನಡೆದ ಜಿ20 ಸಮ್ಮಿತ್‌ಗೆ ಪ್ರಧಾನಿ ನರೇಂದ್ರ ಮೋದಿಯವರು ಆಯ್ಕೆ ಮಾಡಿದ್ದರು.
ಇದಕ್ಕೂ ಮುನ್ನ ಕೇಂದ್ರ ಸಚಿವ ವಿ ಮುರಳೀಧರನ್ ಕೇರಳದಲ್ಲಿ ಕೊರೊನಾ ರೋಗಿಗಳನ್ನು ಇರಿಸಲಾಗಿದ್ದ ಆಸ್ಪತ್ರೆ ಭೇಟಿ ನೀಡಿದ ಬಳಿಕ ಅವರೂ ಕೂಡ ಗೃಹ ದಿಗ್ಬಂಧನದಲ್ಲಿದ್ದರು. ಬಳಿಕ ವರದಿಯಲ್ಲಿ ಕೊರೊನಾ ವೈರಸ್ ನೆಗೆಟಿವ್ ಎಂದು ಬಂದಿತ್ತು.
ಚೀನಾದಲ್ಲಿ ಕೊರೊನಾದಿಂದ 7 ಸಾವಿರಕ್ಕೂ ಹೆಚ್ಚಿನ ಮಂಸಿ ಸಾವನ್ನಪ್ಪಿದ್ದು ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾ ಪೀಡಿತರಾಗಿದ್ದಾರೆ.












Click it and Unblock the Notifications