ಭಾರತದ ಡಿಜಿಟಲ್ ಆರೋಗ್ಯ ಮಿಷನ್ ಯೋಜನೆಗೆ ಬಿಲ್‌ಗೇಟ್ಸ್ ಶ್ಲಾಘನೆ: ಧನ್ಯವಾದ ಎಂದ ಮೋದಿ

ನವದೆಹಲಿ, ಸೆಪ್ಟೆಂಬರ್ 30: ಭಾರತ ಸರ್ಕಾರದ ಆಯುಷ್ಮಾನ್ ಭಾರತ್ ಡಿಜಿಟಲ್ ಆರೋಗ್ಯ ಮಿಷನ್ ಯೋಜನೆಯನ್ನು ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್‌ಗೇಟ್ಸ್ ಶ್ಲಾಘಿಸಿದ್ದಾರೆ. ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದ್ದಾರೆ.

"ಆಯುಷ್ಮಾನ್ ಭಾರತ್ ಡಿಜಿಟಲ್ ಹೆಲ್ತ್ ಮಿಷನ್ ಭಾರತದಲ್ಲಿ ನ್ಯಾಯಸಮ್ಮತ ಆರೋಗ್ಯ ರಕ್ಷಣೆ ಖಚಿತಪಡಿಸುತ್ತದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಬೇಕು,'' ಎಂದು ಟ್ವೀಟ್ ಮಾಡಿದ್ದು, ಈ ಯೋಜನೆಯಿಂದ ಭಾರತದ ಆರೋಗ್ಯ ಪ್ರಗತಿ ವೇಗಗೊಳ್ಳಲಿದೆ ಎಂದಿದ್ದಾರೆ.

ಮೈಕ್ರೋಸಾಫ್ಟ್ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಬಿಲ್‌ಗೇಟ್ಸ್ ಶ್ಲಾಘನೆಗೆ ಧನ್ಯವಾದ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, "ಆರೋಗ್ಯ ಮೂಲಸೌಕರ್ಯದ ಸುಧಾರಣೆಗಾಗಿ ತಂತ್ರಜ್ಞಾನದ ಬಳಕೆ ಹೆಚ್ಚಿಸಲು ಅಪಾರವಾದ ಅವಕಾಶ ಇಲ್ಲಿದೆ. ಅದನ್ನು ಸಾಧಿಸಲು ಭಾರತ ಶ್ರಮಿಸುತ್ತಿದೆ,'' ಎಂದಿದ್ದಾರೆ.

Bill Gates Praises Indias Digital Health Mission Project

ಆಯುಷ್ಮಾನ್ ಭಾರತ್ ಡಿಜಿಟಲ್ ಆರೋಗ್ಯ ಮಿಷನ್‌ಗೆ ಪ್ರಧಾನಿ ಮೋದಿ ಇತ್ತೀಚೆಗಷ್ಟೇ ಚಾಲನೆ ನೀಡಿದ್ದರು. ಈ ಯೋಜನೆಯಿಂದ ಪ್ರತಿಯೊಬ್ಬ ನಾಗರಿಕನಿಗೂ ಆರೋಗ್ಯ ಐಡಿ ಸಿಗುತ್ತದೆ. ಅದನ್ನು ಅವರ ಆರೋಗ್ಯ ಖಾತೆಯಾಗಿ ಬಳಸಲಾಗುತ್ತದೆ. ಈ ಉಪಕ್ರಮದಿಂದ ಬಡ ಮತ್ತು ಮಧ್ಯಮ ವರ್ಗದ ವೈದ್ಯಕೀಯ ಚಿಕಿತ್ಸೆ ಸಮಸ್ಯೆಗಳು ನಿವಾರಣೆಯಾಗಲಿವೆ.

ಡಿಜಿಟಲ್ ಆರೋಗ್ಯ ಮಿಷನ್
ಜನ ಧನ್, ಆಧಾರ್, ಮೊಬೈಲ್ ಮತ್ತು ಸರ್ಕಾರದ ಇನ್ನಿತರ ಡಿಜಿಟಲ್ ಉಪಕ್ರಮಗಳ ಅಧಾರದ ಮೇಲೆ ಡಿಜಿಟಲ್ ಆರೋಗ್ಯ ಮಿಷನ್ ವ್ಯಾಪಕ ಶ್ರೇಣಿಯ ದತ್ತಾಂಶ ಮತ್ತು ಮಾಹಿತಿಯನ್ನು ಒದಗಿಸುವ ಮೂಲಕ ತಡೆರಹಿತ ಆನ್‌ಲೈನ್ ವೇದಿಕೆಯನ್ನು ಒದಗಿಸಲಿದೆ. ಇದರ ಜತೆಗೆ ಮೂಲಸೌಕರ್ಯ ಸೇವೆಗಳು, ಆರೋಗ್ಯಕ್ಕೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಯ ಸುರಕ್ಷತೆ, ಗೌಪ್ಯತೆ ಮತ್ತು ಗೌಪ್ಯತೆಯನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಮುಕ್ತವಾಗಿ, ಪರಸ್ಪರ ಕಾರ್ಯ ನಿರ್ವಹಿಸುವ, ಮಾನದಂಡ ಆಧಾರಿತ ಡಿಜಿಟಲ್ ವ್ಯವಸ್ಥೆಯನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಲಿದೆ. ಜತೆಗೆ ಈ ಡಿಜಿಟಲ್ ಆರೋಗ್ಯ ಮಿಷನ್ ನಾಗರಿಕ ಒಪ್ಪಿಗೆಯೊಂದಿಗೆ ಆರೋಗ್ಯದ ದಾಖಲೆಗಳನ್ನು ಪಡೆಯಲು ಸಕ್ರಿಯಗೊಳಿಸಲಾಗುತ್ತದೆ.

Bill Gates Praises Indias Digital Health Mission Project

ಡಿಜಿಟಲ್ ಆರೋಗ್ಯ ಮಿಷನ್ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಆರೋಗ್ಯ ಐಡಿಯನ್ನು ನೀಡಲಾಗುತ್ತದೆ. ಇದು ಅವರ ಆರೋಗ್ಯ ಖಾತೆಯಾಗಿಯೂ ಕೆಲಸ ಮಾಡುತ್ತದೆ. ಇದಕ್ಕೆ ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ಮೊಬೈಲ್ ಅಪ್ಲಿಕೇಶನ್, ಹೆಲ್ತ್​ಕೇರ್​ ಪ್ರೊಫೆಷನಲ್ಸ್ ರಿಜಿಸ್ಟ್ರೇಷನ್ (ಎಚ್‌ಪಿಆರ್) ಮತ್ತು ಲಿಂಕ್ ಮೂಲಕ ನೋಡಬಹುದು. ಹೆಲ್ತ್​ಕೇರ್​ ಫೆಸಿಲಿಟಿ ರಿಜಿಸ್ಟ್ರಿ (ಎಚ್‌ಎಫ್‌ಆರ್) ಆಧುನಿಕ ಮತ್ತು ಸಾಂಪ್ರದಾಯಿಕ ಔಷಧಗಳಲ್ಲಿ ಎಲ್ಲಾ ಆರೋಗ್ಯ ಸೇವಾ ಪೂರೈಕೆದಾರರ ಭಂಡಾರವಾಗಿ ಕಾರ್ಯ ನಿರ್ವಹಿಸಲಿದೆ.

ಈ ಯೋಜನೆ ಆಸ್ಪತ್ರೆಗಳು, ವೈದ್ಯರು ಮತ್ತು ಆರೋಗ್ಯ ಸೇವಾ ಪೂರೈಕೆದಾರರಿಗೆ ಸುಲಭವಾಗಿ ವ್ಯವಹಾರವನ್ನು ಖಚಿತಪಡಿಸುವಲ್ಲಿ ನೆರವಾಗುತ್ತದೆ. PM-DHM ಸ್ಯಾಂಡ್ ಬಾಕ್ಸ್ಅನ್ನು ಮಿಷನ್​ನ ಒಂದು ಭಾಗವಾಗಿ ರಚಿಸಲಾಗಿದೆ. ಇದು ತಂತ್ರಜ್ಞಾನ ಮತ್ತು ಉತ್ಪನ್ನ ಪರೀಕ್ಷೆಯ ಚೌಕಟ್ಟಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಖಾಸಗಿ ಪಾಲುದಾರರು ಸೇರಿದಂತೆ ಎಲ್ಲಾ ಸಂಸ್ಥೆಗಳಿಗೂ ಸಹಾಯ ಮಾಡಲಿದೆ. ನಾಗರಿಕರು ಆರೋಗ್ಯ ಸೌಲಭ್ಯಗಳನ್ನು ಪ್ರವೇಶಿಸಲು ಕೇವಲ ಒಂದು ಕ್ಲಿಕ್ ಮಾಡುವಷ್ಟು ಅಂತರದಲ್ಲಿರುತ್ತಾರೆ ಎಂದು ಹೇಳಲಾಗಿದೆ.

ಪ್ರಯೋಜನಗಳು
* ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಕ್ಷಣದಲ್ಲಿ ಪಡೆಯಬಹುದು.
* ಆಸ್ಪತ್ರೆಗೆ ದಾಖಲಾಗುವುದರಿಂದ ಡಿಸ್ಚಾರ್ಜ್ ಆಗುವವರೆಗಿನ ಸಂಪೂರ್ಣ ಮಾಹಿತಿ ಸಂಗ್ರಹವಾಗಿರುತ್ತದೆ.
* ಒಂದು ವೈದ್ಯರಲ್ಲಿ ಪರಿಶೀಲಿಸಿದ ಬಳಿಕ ಇನ್ನೊಬ್ಬ ವೈದ್ಯರನ್ನು ಭೇಟಿಯಾದಾಗ ನಿಮ್ಮ ಡಿಜಿಟಲ್ ಹೆಲ್ತ್ ಕಾರ್ಡ್ ಮೂಲಕ ಸುಲಭದಲ್ಲಿ ಆರೋಗ್ಯದ ವಿವರಗಳನ್ನು ವೈದ್ಯರು ಪಡೆಯಲು ಸಹಾಯವಾಗುತ್ತದೆ.

ಕಾರ್ಡ್ ಮಾಡಿಸಲು ಬೇಕಾದ ಮಾಹಿತಿ
ಆಧಾರ್ ಕಾರ್ಡ್ ಮೂಲಕ ಗುರುತಿನ ಚೀಟಿಯನ್ನು ಪಡೆಯಬಹುದು. ಇದಕ್ಕೆ ಆಧಾರ್ ಮಾಹಿತಿಯನ್ನೇ ನೀಡಬೇಕು ಮತ್ತು ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಅಗತ್ಯ. ಪ್ರತಿ ವ್ಯಕ್ತಿಯು ಗುರುತಿನ ಸಂಖ್ಯೆಯ ಜತೆ ಡಿಜಿಟಲ್ ಆರೋಗ್ಯ ಯೋಜನೆಗೆ ಲಿಂಕ್ ಮಾಡಿಕೊಳ್ಳಬೇಕು.

ಸದ್ಯದ ಮಾಹಿತಿಯ ಪ್ರಕಾರ ಆರೋಗ್ಯ ಸೇವೆಗಳನ್ನು ನೀಡುವ ಸಂಸ್ಥೆಗಳು ಅಥವಾ ಆಸ್ಪತ್ರೆಗಳು ಈ ಡಿಜಿಟಲ್ ಹೆಲ್ತ್ ಕಾರ್ಡ್ (ಗುರುತಿನ ಚೀಟಿ) ನೀಡಲಿವೆ. ಉಚಿತವಾದ ಸೌಲಭ್ಯ ಇದಾಗಿದ್ದು, ನಾಗರಿಕರು ತಮ್ಮ ಇಚ್ಛೆಯ ಮೇರೆಗೆ ಇದನ್ನು ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+