ಚುನಾವಣಾ ಪ್ರಚಾರದಿಂದ ಬ್ಯಾನ್ ಆದ ಪ್ರಜ್ಞಾ, 72 ಗಂಟೆ ಏನು ಮಾಡ್ತಾರೆ?

ನವದೆಹಲಿ, ಮೇ 2: ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಚುನಾವಣಾ ಪ್ರಚಾರದಿಂದ ಬ್ಯಾನ್ ಆಗಿರುವ ಬಿಜೆಪಿಯ ಪ್ರಜ್ಞಾ ಸಿಂಗ್ ಈ 72 ಗಂಟೆಗಳ ಕಾಲ ಈ ಕೆಲಸಗಳನ್ನು ಮಾಡಲಿದ್ದಾರೆ.

ಕೆಲವು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ 72 ಗಂಟೆಗಳ ಕಾಲ ಚುನಾವಣಾ ಪ್ರಚಾರದಿಂದ ನಿಷೇಧಗೊಂಡಿರುವ ಪ್ರಜ್ಞಾ ಸಿಂಗ್ ಠಾಕೂರ್ ಗುರುವಾರ ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ.

ಇಂದು ರಿವೆರಾ ರೆಸಿಡೆನ್ಸ್‌ ಅಲ್ಲಿರುವ ಜನರ ಜೊತೆ ಮಾತುಕತೆ ನಡೆಸಲಿದ್ದಾರೆ ಅದಾದ ಬಳಿಕ ಭೋಪಾಲದಲ್ಲಿರುವ'ಕರ್ಫ್ಯೂವಾಲಿ ಮಾತಾ ಮಂದಿರ'ಕ್ಕೆ ಭೇಟಿ ನೀಡಲಿದ್ದಾರೆ.

Banned from poll campaigning BJPs Sadhvi Pragya

ಏಪ್ರಿಲ್ 18ರಂದು ಭೋಪಾಲದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ದಿವಂಗತ ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆ ಅವರು ನನ್ನ ಶಾಪದಿಂದಲೇ ಸತ್ತಿದ್ದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ ಅವರನ್ನು ಭಯೋತ್ಪಾದಕ ಎಂದು ಕರೆದು ಚುನಾವಣಾ ಆಯೋಗದಿಂದ ಮೂರನೇ ನೋಟಿಸ್ ಪಡೆದಿದ್ದರು.

ಸಾಧ್ವಿ ಪ್ರಜ್ಞಾ ಸಿಂಗ್ 2008ರ ಮಾಲೆಗಾವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಈಗ ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ವಿರುದ್ಧ ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+