ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವತಿಯ ಮೇಲೆ 'ವೀರ್ಯ' ತುಂಬಿದ ಬಲೂನ್ ಎಸೆತ!

By Prasad
|
Google Oneindia Kannada News

ನವದೆಹಲಿ, ಮಾರ್ಚ್ 01 : ದೇಶದೆಲ್ಲೆಡೆಯಲ್ಲಿಯೂ ಹೋಳಿ ಹಬ್ಬದ ಸಂಭ್ರಮ. ಹುಡುಗ, ಹುಡುಗಿಯರೆಲ್ಲ ಓಕುಳಿ ಆಡುವುದರಲ್ಲಿ ತೊಡಗಿದ್ದಾರೆ. ಬಣ್ಣಬಣ್ಣದ ಬಲೂನುಗಳಲ್ಲಿ ಕಲರ್ ಕಲರ್ ನೀರನ್ನು ತುಂಬಿ ಎಸೆಯುವುದು ಮಾಮೂಲು.

ಹಾಗೆಯೆ ಬಸ್ಸಲ್ಲಿ ಹೋಗುತ್ತಿದ್ದಾಗ ಓರ್ವ ತರುಣಿಯ ಮೇಲೆಯೂ ಒಂದು ಬಲೂನ್ ಬಂದು ಬಿದ್ದಿದೆ. ಇದು ಆ ತರುಣಿಗೆ ಅಚ್ಚರಿ ತಂದಿಲ್ಲ, ಆದರೆ ಹೇಸಿಗೆ ತಂದಿದೆ. ಏಕೆಂದರೆ, ಆ ಬಲೂನಿನಲ್ಲಿದ್ದದ್ದು ಬಣ್ಣದ ನೀರಲ್ಲ, ವೀರ್ಯ ಅಥವಾ ವೀರ್ಯದಂತಿರುವ ವಸ್ತು!

ಕನಸುಗಳಿಗೂ ಬಣ್ಣ ಹಚ್ಚುವ ಕಾಮನಹಬ್ಬ ಹೋಳಿ

"ಮಾನವೀಯತೆಯೆಂಬುದು ಕೆಟ್ಟಕೆರ ಹಿಡಿದುಹೋಗಿದೆ. ಅಪರಿಚಿತರ ಮೇಲೆ ಹೀಗೆ ವೀರ್ಯ ತುಂಬಿದ ಬಲೂನು ಎಸೆಯುವುದನ್ನು ಒಪ್ಪಿಕೊಳ್ಳುವುದು ಸಾಧ್ಯವೇ ಇಲ್ಲ. ಇದು ನನ್ನ ಗೌರವಕ್ಕೆ ಚ್ಯುತಿ ತಂದಿದೆ" ಎಂದು ಕಾಲೇಜಿನ ವಿದ್ಯಾರ್ಥಿನಿ ತನ್ನ ಆಕ್ರೋಶವನ್ನು ಹೊರಹಾಕಿದ್ದಾಳೆ.

Balloon filled with 'semen' thrown on student in Delhi

ತನ್ನ ಮೇಲೆ ಇಂಥ ಬಲೂನು ಎಸೆಯಲಾಗಿದೆ ಎಂದು ಲೇಡಿ ಶ್ರೀರಾಮ್ ಕಾಲೇಜಿನ ವಿದ್ಯಾರ್ಥಿನಿ ದೂರಿದ್ದಾಳೆ. ಇದರ ಹಿಂದೆಯೇ, ಜೀಸಸ್ ಮತ್ತು ಮೇರಿ ಕಾಲೇಜಿನ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರು ಇಂಥ ಅಸಹ್ಯಕರ ಕೃತ್ಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ಮೇಲೆ ಕೂಡಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

ಇದು ನಗರದ ನಕ್ಸರ ಕೃತ್ಯ. ಮೊದಲೇ ಪ್ಲಾನ್ ಮಾಡಿಕೊಂಡು ಈ ಹುಡುಗಿಯರು ದೂರುತ್ತಿದ್ದಾರೆ. ಹಿಂದೂಗಳ ಹಬ್ಬದ ಮೇಲೆಯೇ ಇವರಿಗೆ ಕೆಂಗಣ್ಣು. ಈ ಯುವತಿಯರಿಗೆ ಶೆಹಲಾ ಮತ್ತು ಗುರ್ಮೆಹರ್ ಕೌರ್ ರಂತೆ ಲೈಮ್ ಲೈಟಿಗೆ ಬರಬೇಕು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Balloon filled with 'semen' thrown on student in Delhi

ಈ ಆಕ್ಷೇಪ ವ್ಯಕ್ತವಾಗಿರುವುದು ಏಕೆಂದರೆ, ಬಲೂನಿನಲ್ಲಿ ವೀರ್ಯದಂತಿರುವ ವಸ್ತು ಇತ್ತೆಂದು ಈ ಯುವತಿ ಮಾತ್ರವಲ್ಲ ಇನ್ನೂ ಕೆಲವು ಯುವತಿಯರು ದೂರಿದ್ದಾರೆ. ವೀರ್ಯದಂತಿರುವ ವಸ್ತುವೆಂದರೆ ಏನರ್ಥ. ಇವರಿಗೆ ವೀರ್ಯ ಹೇಗಿರುತ್ತದೆಂದು ಗೊತ್ತಿಲ್ಲವೆ? ಎಂದು ಮತ್ತೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೋಳಿ ಹುಣ್ಣಿಮೆಯ ಪೌರಾಣಿಕ ಕಥೆ - ಭಾಗ1 ಹೋಳಿ ಹುಣ್ಣಿಮೆಯ ಪೌರಾಣಿಕ ಕಥೆ - ಭಾಗ1

ಏನಿದು ಲಾಠ್ ಮಾರ್ ಹೋಳಿ? ಇದರ ಪುರಾಣ ಹಿನ್ನೆಲೆ ಏನು? ಏನಿದು ಲಾಠ್ ಮಾರ್ ಹೋಳಿ? ಇದರ ಪುರಾಣ ಹಿನ್ನೆಲೆ ಏನು?

English summary
A young college student has alleged that a balloon filled with semen like material was thrown at her in the bus. She says it is against her dignity and horrible to see humanity has degraded. Many people have objected to her claim also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X