ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ, ಏಪ್ರಿಲ್ 22: ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಸಂಸತ್ತಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಆತಂಕ ಆರಂಭವಾಗಿದೆ.

ಸೋಂಕು ತಗುಲಿರುವ ಉದ್ಯೋಗಿ ಏಪ್ರಿಲ್ 15ರಂದು ಕಚೇರಿಗೆ ಹಾಜರಾಗಿದ್ದರು. ನಂತರ ಅನಾರೋಗ್ಯ ಕಾಣಿಸಿಕೊಂಡ ಕಾರಣ ಏಪ್ರಿಲ್ 21ರಂದು ತಪಾಸಣೆಗೆ ಒಳಪಟ್ಟರು. ರಕ್ತ ಪರೀಕ್ಷೆ ವರದಿ ಬಂದಾಗ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ನಾಗರಿಕ ವಿಮಾನಯಾನ ಸಚಿವಾಲಯ ಪ್ರಕರಣ ಕೇಂದ್ರ ಸರ್ಕಾರದ ಸಚಿವಾಲಯದಲ್ಲಿ ಸೋಂಕು ತಗುಲಿರುವ ಮೊದಲ ಪ್ರಕರಣ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ ತಿಳಿಸಿದ್ದಾರೆ.

Aviation Ministry Employee Tests Positive For Coronavirus

ನವದೆಹಲಿಯ ಜೋರ್‌ಭಾಗ್ ರಾಜೀವ್‌ಗಾಂಧಿ ಭವನದ ಸಚಿವಾಲಯದ ಪ್ರಧಾನ ಕಚೇರಿಯನ್ನು ನಿಯಮದಂತೆ ಸೀಲ್ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ರೋಗಿಯ ಸಂಪರ್ಕದಲ್ಲಿದ್ದ ಎಲ್ಲಾ ಸಹೋದ್ಯೋಗಿಗಳನ್ನು ಪ್ರತ್ಯೇಕವಾಗಿ ತಮ್ಮ ಮನೆಗಳಲ್ಲಿಯೇ ಸ್ವಯಂ ಕ್ವಾರಂಟೈನ್ ಗೆ ಒಳಗಾಗುವಂತೆ ತಿಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಕೊರೊನಾ ಪಾಸಿಟಿವ್ ಕಂಡು ಬಂದಿರುವ ಉದ್ಯೋಗಿಗೆ ಕೆಲವು ದಿನಗಳ ಹಿಂದೆ ಗಂಟಲು ನೋವು ಕಾಣಿಸಿಕೊಂಡಿತ್ತು. ಈ ಕಾರಣದಿಂದಾಗಿ ಮಂಗಳವಾರ ರಕ್ತ ಪರೀಕ್ಷೆ ನಡೆಸಲಾಯಿತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಕೆಲಸ ಮಾಡುವ ಉದ್ಯೋಗಿಗಳು 125 ವಸತಿ ಸಮುಚ್ಛಯದ ಕ್ಲಸ್ಟರ್‌ನಲ್ಲಿ ವಾಸವಾಗಿದ್ದಾರೆ . ಈಗಾಗಲೇ ದೆಹಲಿ ಸರ್ಕಾರ ಈ ಪ್ರದೇಶವನ್ನು ಸೀಲ್ ಮಾಡಿದೆ.

ಸಂಸತ್ತಿನ ಉದ್ಯೋಗಿಗಳು ವಾಸಿಸುತ್ತಿದ್ದ ಕಾಳಿ ಬಾರಿ ಮಾರ್ಗದ ಬಳಿ ಹೆಚ್ಚಿನ ಸಂಖ್ಯೆಯ ಮನೆಗಳನ್ನು ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಕಂಟೈನ್‌ಮೆಂಟ್ ಜೋನ್ ಆಗಿ ಘೋಷಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+