ತಪ್ಪು ನಕ್ಷೆ ತೋರಿಸಿ ಕ್ಷಮೆಯಾಚಿಸಿದ ಆಸ್ಟ್ರೇಲಿಯಾ
ನವದೆಹಲಿ, ನ. 15: ಆಸ್ಟ್ರೇಲಿಯಾದ ಬ್ರಿಸ್ಬೇನ್ ನಗರದಲ್ಲಿ ನಡೆಯುತ್ತಿರುವ ಜಿ 20 ಸದಸ್ಯ ರಾಷ್ಟ್ರಗಳ ಶೃಂಗ ಸಭೆಗಿಂತ ಸ್ವಲ್ಪ ಮೊದಲು ಎಲ್ಲ ದೇಶಗಳ ನಾಯಕರಿಗೆ ತೋರಿಸಿದ ಭಾರತದ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಪಾಕಿಸ್ತಾನದಲ್ಲಿರುವಂತೆ ತೋರಿಸಿದ ಆಸ್ಟ್ರೇಲಿಯಾ, ಭಾರತ ಪ್ರತಿಭಟನೆ ವ್ಯಕ್ತಪಡಿಸಿದ ನಂತರ ಕ್ಷಮೆಯಾಚಿಸಿದೆ. ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಕೂಡ ಉಪಸ್ಥಿತರಿದ್ದರು.

ಇದನ್ನು ಗಮನಿಸಿದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಸುಜಾತಾ ಸಿಂಗ್ ತಕ್ಷಣ ಪ್ರತಿಭಟನೆ ವ್ಯಕ್ತಪಡಿಸಿದರು.
ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸಯ್ಯದ್ ಅಕ್ಬರುದ್ದೀನ್, "ಪ್ರಕರಣ ಕುರಿತು ಭಾರತೀಯ ವಿದೇಶಾಂಗ ಕಾರ್ಯದರ್ಶಿಯವರು ಉಗ್ರ ಪ್ರತಿಭಟನೆ ವ್ಯಕ್ತಪಡಿಸಿದರು. ಆದರೆ, ಅನರ್ಹವಾದ ಕ್ಷಮೆಯಾಚನೆ ಸ್ವೀಕರಿಸಿದರು" ಎಂದು ತಿಳಿಸಿದ್ದಾರೆ. [ಬ್ರಿಸ್ಬೇನ್ ನಲ್ಲಿ ಇಂಡಿಯನ್ ಫುಡ್ ಕೋರ್ಟ್]
ಆಸ್ಟ್ರೇಲಿಯಾ ದೇಶಕ್ಕೆ 28 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿದ್ದಾರೆ. 1986ರಲ್ಲಿ ರಾಜೀವ್ ಗಾಂಧಿ ಅವರು ಆಸ್ಟ್ರೇಲಿಯಾಕ್ಕೆ ತೆರಳಿದ್ದೇ ಭಾರತದ ಕೊನೆಯ ಭೇಟಿಯಾಗಿತ್ತು.












Click it and Unblock the Notifications