ಅರವಿಂದ್ ಕೇಜ್ರಿವಾಲ್ ಅವರು ನನ್ನ ದೇವರು

ನವದೆಹಲಿ, ಏ.9: ದೆಹಲಿ ಮಾಜಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಕೆನ್ನೆ ಊದಿಸಿದ ಆಟೋರಿಕ್ಷಾ ಚಾಲಕ ಇವತ್ತು ಯೂ ಟರ್ನ್ ಹೊಡೆದಿದ್ದಾನೆ. ಅರವಿಂದ್ ಕೇಜ್ರಿವಾಲ್ ನನ್ನ ಪಾಲಿನ ದೇವರು. ಅವರು ದೇಶದ ನಿಜವಾದ ಹೀರೋ, ರಿಯಲ್ ಹೀರೋ ನಂ.1 ಎಂದೆಲ್ಲ ಹಾಡಿಹೊಗಳಿದ್ದಾನೆ.

ತಮ್ಮ ಕಪಾಳಕ್ಕೆ ಹೊಡೆದ ಆಟೋ ಚಾಲಕ ಲಾಲಿ ಅವರ ಮನೆಗೆ ಬುಧವಾರ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಭೇಟಿ ನೀಡಿ ಮಾತುಕತೆ ನಡೆಸಿದರು. ಆತ ನನ್ನ ಕೆನ್ನೆಗೆ ಹೊಡೆದ ಕಾರಣ ಕೇಳುವುದು ಮುಖ್ಯ ಕೇಜ್ರಿವಾಲ್ ಹೇಳಿದ್ದರು.

Attacker apologises after Kejriwal meets him, calls him 'God'

ಲಾಲಿ ಮನೆಗೆ ತೆರಳಿದ್ದ ಕೇಜ್ರಿವಾಲ್ ಅವರ ಬಳಿ ಲಾಲಿ ಕ್ಷಮೆಯಾಚಿಸಿದ್ದು, ತಾನು ಮಾಡಿದ್ದು ತಪ್ಪು. ತನ್ನನ್ನು ಕ್ಷಮಿಸುವಂತೆ ಮನವಿ ಮಾಡಿಕೊಂಡಿದ್ದಾನೆ.
ವಾಯುವ್ಯ ದೆಹಲಿಯ ಸುಲ್ತಾನ್ ‌ಪುರಿಯಲ್ಲಿ ಆಪ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದ ವೇಳೆ ಆಟೋ ಚಾಲಕ ಲಾಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮೊದಲು ಹಾರ ಹಾಕಿ, ಬಳಿಕ ಅವರ ಮೇಲೆ ಹಲ್ಲೆ ನಡೆಸಿದ್ದ.

ಕಪಾಳಮೋಕ್ಷಕ್ಕೊಳಗಾದ ನಂತರ ಕೇಜ್ರಿವಾಲ್ ರಾಜ್ ‌ಘಟ್ ‌ನ ಮಹಾತ್ಮಗಾಂಧಿ ಪುಣ್ಯ ಭೂಮಿಯಲ್ಲಿ ಕುಳಿತು ಸುದೀರ್ಘ ದ್ಯಾನಸ್ಥರಾಗಿದ್ದರು. ಬೆಂಗಳೂರಿನಲ್ಲೂ ಕ್ವೀನ್ ರಸ್ತೆ ಬಳಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದ್ದರು.

ಏಕಾಏಕಿ ಕೇಜ್ರಿವಾಲ್ ಕಾಲಿಗೆರೆಗಿದ ಆತ, ದೊಡ್ಡ ತಪ್ಪು ಮಾಡಿದ್ದೇನೆ. ಕ್ಷಮಿಸಿಬಿಡಿ ಎಂದು ಅಳುಮೋರೆಯೊಂದಿಗೆ ಕೈ ಮುಗಿದು ಬೇಡಿಕೊಂಡಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಕೇಜ್ರಿವಾಲ್ ನಾನು ಎಲ್ಲವನ್ನು ಮರೆತಿದ್ದಾನೆ ಎಂದು ಕೆನ್ನೆ ತಟ್ಟಿ ಹೊರಟು ಹೋದರು ಎಂದು ತಿಳಿದು ಬಂದಿದೆ.

ಅರವಿಂದ್ ಕೇಜ್ರಿವಾಲ್ ಅವರ ಜತೆ ಎಎಪಿಯ ಅಭ್ಯರ್ಥಿ ರಾಖಿ ಬಿರ್ಲಾ ಮನೀಶ್ ಸಿಸೋಡಿಯಾ ಅವರು ಲಾಲಿ ಮನೆಗೆ ತೆರಳಿದ್ದರು. ಏ.4 ರಂದು ದೆಹಲಿಯಲ್ಲಿ ಯುವಕನೊಬ್ಬ ಇದೇ ರೀತಿ ಅರವಿಂದ್ ಅವರ ಮೇಲೆ ಹಲ್ಲೆ ನಡೆಸಿದ್ದ. ಇದಕ್ಕೂ ಮುನ್ನ ವಾರಣಸಿಯ ಮುಂತಾದೆಡೆ ಮಸಿ ಬಳಿದ ಪ್ರಕರಣಗಳು ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+