ಅರೇ ಇದೇನಿದು! ಮೋದಿ ಮೋಡಿಗೆ ಸಿಲುಕಿದ ಒಬಾಮಾ

ನವದೆಹಲಿ,ಫೆ.5: ಸಾಮಾಜಿಕ ಜಾಲ ತಾಣಗಳು ಸುದ್ದಿಗಳನ್ನು ಎಷ್ಟು ಬೇಗ ಸಾರ್ವಜನಿಕರಿಗೆ ತಲುಪಿಸುತ್ತದೆಯೋ ಅಷ್ಟೇ ಸಮರ್ಥವಾಗಿ ಸುಳ್ಳು ಸುದ್ದಿಯನ್ನು ಹರಡಿಬಿಡುತ್ತದೆ. ಇದಕ್ಕೆ ದೊಡ್ಡ ದೊಡ್ಡ ಮಾಧ್ಯಮ ಸಂಸ್ಥೆಗಳು ಹೊರತಲ್ಲ. ಬರಾಕ್ ಒಬಾಮಾ ಕೂಡಾ ನಮೋ ಭಾಷಣ ಕೇಳುತ್ತಾರೆ ಎಂಬ ಅಡಿಬರಹವಿದ್ದ ಚಿತ್ರ ಎಲ್ಲೆಡೆ ಹರಡುತ್ತಿದೆ.

"Even Obama listens (to) the speech of NaMo," ಎಂಬ ವಿವರಣೆಯೊಂದಿಗೆ ಅಮೆರಿಕಾಧ್ಯಕ್ಷ ಬರಾಕ್ ಒಬಾಮಾ ಅವರು ಗುಜರಾತ್ ಮುಖ್ಯಮಂತ್ರಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಭಾಷಣವನ್ನು ಟಿವಿಯಲ್ಲಿ ನೋಡುವ ಚಿತ್ರ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ತ್ವರಿತವಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

Are Narendra Modi speeches being watched by Barack Obama?

ಆದರೆ, ಇದೊಂದು ನಕಲಿ, ಬದಲಾಯಿಸಿದ ಚಿತ್ರವಾಗಿದ್ದು, ಬರಾಕ್ ಒಬಾಮಾ ಅವರು ಮೋದಿ ಭಾಷಣವನ್ನು ನೋಡುವುದಾಗಿ, ಕೇಳುವುದಾಗಿ ಮಾಡಿಲ್ಲ ಎಂಬುದು ತಿಳಿದು ಬಂದಿದೆ. 2011ರ ಜನವರಿಯಲ್ಲಿ ಶ್ವೇತಭವನದಲ್ಲಿ ಕುಳಿತ ಬರಾಕ್ ಒಬಾಮಾ ಅವರು ಈಜಿಪ್ಟಿನ ಅಧ್ಯಕ್ಷ ಹೋಸ್ನಿ ಮುಬಾರಕ್ ಅವರ ಭಾಷಣವನ್ನು ನೋಡುತ್ತಿರುವ ಚಿತ್ರವನ್ನು ನಕಲು ಮಾಡಲಾಗಿದೆ.

ಮುಬಾರಕ್ ಜಾಗದಲ್ಲಿ ಮೋದಿ ಕಾಣಿಸಿಕೊಂಡಿದ್ದಾರೆ. ಇದೊಂದು ನಕಲಿ ಚಿತ್ರ ಎಂದು ನೋಡಿದ ತಕ್ಷಣಕ್ಕೆ ತಿಳಿಯುತ್ತದೆ. ಆದರೂ ಗುಜರಾತಿನ ನವಸರಿ ಕ್ಷೇತ್ರದ ಬಿಜೆಪಿ ಸಂಸದ ಸಿ.ಆರ್ ಪಾಟೀಲ್ ಅವರು ಈ ಚಿತ್ರವನ್ನು ರೀಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಪಾಟೀಲ್ ಅವರನ್ನು ಪ್ರಶ್ನಿಸಿದಾಗ ನನಗೆ ಇದರ ಬಗ್ಗೆ ಅರಿವಿಲ್ಲ. ಫೇಸ್ ಬುಕ್ ನಲ್ಲಿ ಯಾರೋ ಷೇರ್ ಮಾಡಿದ್ದರು ನಾನು ಅದರ ಸತ್ಯಾಸತ್ಯತೆ ಬಗ್ಗೆ ಚೆಕ್ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಒಟ್ಟಾರೆ, ತಂತ್ರಜ್ಞಾನ, ಸಾಮಾಜಿಕ ಜಾಲ ತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚುನಾವಣೆ ಪ್ರಚಾರಕ್ಕೆ ಇಳಿದಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪರ ಅಭಿಮಾನಿಗಳು ಪ್ರಚಾರ ಕಾರ್ಯ ಚೆನ್ನಾಗಿ ಮಾಡುತ್ತಿದ್ದಾರೆ. ಯಾವುದು ನಿಜ ಯಾವುದು ಸುಳ್ಳು ಲೆಕ್ಕಾಚಾರ ಹಾಕುವುದು ಸಾರ್ವಜನಿಕರಿಗೆ ಬಿಟ್ಟಿದ್ದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+