ಅನಿಲ್ ಅಂಬಾನಿಗಾಗಿ ಎಚ್‌ಎಎಲ್ ಮುಳುಗಿಸುತ್ತಿದ್ದಾರೆ: ರಾಹುಲ್ ಆರೋಪ
ನವದೆಹಲಿ, ಜನವರಿ 7: ಎಚ್ ಎಎಲ್ ಬಳಿ ತನ್ನ ನೌಕರರಿಗೆ ಸಂಬಳ ನೀಡಲು ಹಣವಿಲ್ಲದೆ ಸಾಲ ಮಾಡುವ ಸ್ಥಿತಿಗೆ ತಲುಪಿರುವುದನ್ನು ರಾಹುಲ್ ಗಾಂಧಿ ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರಮುಖ ಟೀಕಾಸ್ತ್ರವಾಗಿ ಬಳಸಿಕೊಂಡಿದ್ದಾರೆ.
ಎಚ್‌ಎಎಲ್ ಖಜಾನೆ ಬರಿದಾಗಿ ಅದು ಆರ್ಥಿಕ ಮುಗ್ಗಟ್ಟು ಎದುರಿಸಲು ರಫೇಲ್ ಒಪ್ಪಂದವೇ ಕಾರಣ ಎಂದು ರಾಹುಲ್ ಗಾಂಧಿ ತಳುಕು ಹಾಕಿದ್ದಾರೆ.
ವೇತನ ಪಾವತಿಗೆ ಎಚ್‌ಎಎಲ್ ಬಳಿ ಸಾಕಷ್ಟು ಹಣವಿಲ್ಲದೆ ಇರುವುದು ಆಶ್ಚರ್ಯವೇನಲ್ಲ. ಅನಿಲ್ ಅಂಬಾನಿ ಅವರ ಬಳಿ ರಫೇಲ್ ಒಪ್ಪಂದವಿದೆ. ಆದರೆ ಅದನ್ನು ಈಡೇರಿಸಲು ಅವರಿಗೆ ಪ್ರತಿಭಾವಂತ ತಂತ್ರಜ್ಞರು ಬೇಕಾಗಿದ್ದಾರೆ.
That HAL doesn’t have enough cash to pay salaries, isn’t surprising.
— Rahul Gandhi (@RahulGandhi) 7 January 2019
Anil Ambani has Rafale. He now needs HAL’s brilliant talent pool to deliver on his contracts.
Without salaries, HAL’s best engineers & scientists will be forced to move to AA’s venture.#SaveHAL https://t.co/IaqgS3pyJ7
ಇತ್ತ ಎಚ್‌ಎಎಲ್‌ನ ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳು ಸಂಬಳವಿಲ್ಲದೆ ರಿಲಯನ್ಸ್ ಸೇವೆಗೆ ಹೋಗುವ ಅನಿವಾರ್ಯತೆಯನ್ನು ಸೃಷ್ಟಿಸಲಾಗುತ್ತಿದೆ ಎಂದು ಉದ್ದೇಶಪೂರ್ವಕವಾಗಿಯೇ ಎಚ್‌ಎಎಲ್ ಹಣಕಾಸಿನ ಕೊರತೆ ಅನುಭವಿಸುವಂತೆ ಮಾಡಲಾಗಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಕೂಡ ಎಚ್‌ಎಎಲ್‌ನ ಬಿಕ್ಕಟ್ಟಿಗೆ ಅನಿಲ್ ಅಂಬಾನಿ ಅವರ ಸಂಸ್ಥೆಯೆಡೆಗಿನ ಒಲವು ಕಾರಣ ಎಂದು ದೂರಿದ್ದಾರೆ.

ಈ ಪ್ಲ್ಯಾನ್ ತುಂಬಾ ಸರಳವಾಗಿದೆ. ಸಾಲದಿಂದ ಹೊರಬರಲು ದೊಡ್ಡಣ್ಣ, ಕಿರಿ ಸಹೋದರನಿಗೆ ತಟ್ಟೆಯೊಳಗೆ ಎಚ್‌ಎಎಲ್ ಎಂಬ ಉಡುಗೊರೆಯನ್ನಿಟ್ಟು ಕೊಡುತ್ತಿದೆ. ಸರ್ಕಾರದಲ್ಲಿರುವ ಆತನ ಸ್ನೇಹಿತ ಅವರಿಗೆ ನೆರವು ನೀಡುತ್ತಿದ್ದಾರೆ. ಇದರ ಮೂಲಕ ಭಾರತದ ದುರಂತ ಕಥೆ ಬರೆದಿದ್ದಾರೆ. ಮತ್ತು ಅವರು ಇಂಡಿಯಾವನ್ನು ಭಾರತ ಮಾತೆ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.












Click it and Unblock the Notifications