ಆನಂದ್ ಮಹೀಂದ್ರಾ ಹೇಳಿದ ನಾಪತ್ತೆಯಾಗಿದ್ದ ನಿಗೂಢ ಮಹಿಳೆಯ ಕತೆ!

"ನಾಪತ್ತೆಯಾಗಿದ್ದ ನಿಗೂಢ ಮಹಿಳೆಯ ಕತೆ ಇದು.. ಆದರೆ ಇದು ನಮ್ಮೆಲ್ಲರ ಕತೆಯೂ ಹೌದು" ಎಂಬ ಟ್ವೀಟ್ ಮೂಲಕ ಉದ್ಯಮಿ ಆನಂದ್ ಮಹೀಂದ್ರಾ ಮಹಿಳೆಯೊಬ್ಬರ ಕತೆಯನ್ನು ಟ್ವೀಟ್ ಮಾಡಿದ್ದಾರೆ.

ಸದಾ ಸಕಾಲಿಕ ವಿಷಯಗಳ ಬಗ್ಗೆ ನಿರಂತರವಾಗಿ ಟ್ವೀಟ್ ಮಾಡುತ್ತ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಆನಂದ್ ಮಹೀಂದ್ರಾ ಅವರ ಈ ಟ್ವೀಟ್ ಕೊಂಚ ಡಿಫರೆಂಟ್. ಈ ಕತೆಯ ಮೂಲಕ ಬದುಕಿನ ಪಾಠ ಹೇಳಲು ಮಹೀಂದ್ರಾ ಪ್ರಯತ್ನಿಸಿದ್ದಾರೆ.

ಆ ಕತೆ ಹೀಗೆ ಸಾಗುತ್ತದೆ....
"ಐಸ್ ಲ್ಯಾಂಡಿನ ಎಲ್ಡಗ್ಜಾ ಎಂಬ ಕಣಿವೆಗೆ ಗುಂಪೊಂದು ಪ್ರವಾಸಕ್ಕೆ ಹೋಗಿತ್ತು. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಕಾಣೆಯಾಗಿದ್ದರು.

Anand Mahindra Tweets A Story Of Missing Womans Mystery

ಈ ಗುಂಪು ಬಸ್ಸಿನಲ್ಲಿ ಕಣಿವೆ ಬಳಿ ತೆರಳಿತ್ತು. ಆ ಸಂದರ್ಭದಲ್ಲಿ ಗುಂಪಿನಲ್ಲಿದ್ದ ಮಹಿಳೆಯೊಬ್ಬರು ಕಾಣೆಯಾಗಿದ್ದಾರೆ ಎಂದು ಪ್ರಕಟಿಸಲಾಯಿತು. ಆಕೆ ತೊಟ್ಟಿದ್ದ ಬಟ್ಟೆಯ ಬಣ್ಣ ಮತ್ತು ಆಕೆ ನೋಡುವುದಕ್ಕೆ ಹೇಗಿದ್ದಾಳೆ ಎಂಬಿತ್ಯಾದಿ ವಿವರಗಳನ್ನೂ ಪ್ರಕಟಿಸಲಾಗಿತ್ತು. ಗುಂಪಿನಲ್ಲಿರುವ ಎಲ್ಲರೂ ಆಕೆಯ ಹುಡುಕಾಟದಲ್ಲಿ ತೊಡಗಿದರು. ರಾತ್ರಿಯಿಂದ ಬೆಳಗ್ಗಿನ ಜಾವ 3 ಗಂಟೆಯವರೆಗೆ ಹುಡುಕಾಟ ನಡೆದರೂ ಮಹಿಳೆ ಪತ್ತೆಯಾಗಿರಲಿಲ್ಲ. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಗುಂಪಿನಲ್ಲಿದ್ದ ಮಹಿಳೆಯೊಬ್ಬರು ಮುಂದೆ ಬಂದು, ನಾಪತ್ತೆಯಾಗಿದ್ದ ಮಹಿಳೆಯ ವಿವರವನ್ನು ಮತ್ತೊಮ್ಮೆ ಹೇಳುವಂತೆ ಮನವಿ ಮಾಡಿದರು. ಆಕೆ ತೊಟ್ಟಿದ್ದ ಬಟ್ಟೆಯ ಬಣ್ಣದ ಬಗ್ಗೆ ಗುಂಪಿನ ಮುಖಂಡ ಮತ್ತೊಮ್ಮೆ ಮಾಹಿತಿ ನೀಡಿದರು. ಇದ್ದಕ್ಕಿದ್ದಂತೇ ಮಹಿಳೆ ಜೋರಾಗಿ ನಗುವುದಕ್ಕೆ ಆರಂಭಿಸಿದರು! ಇಡೀ ತಂಡ ಹುಡುಕುತ್ತಿದ್ದುದು ತನ್ನನ್ನೇ, ತಾನು ದಾರಿಯ ನಡುವಲ್ಲಿ ಬಟ್ಟೆ ಬದಲಾಯಿಸಿದ್ದೆ. ಅದು ಯಾರಿಗೂ ಗೊತ್ತಿರಲಿಲ್ಲ. ಆದ್ದರಿಂದ ಗುಂಪಿನಿಂದ ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ಎಲ್ಲರೂ ತಪ್ಪುತಿಳಿದರು. ಎಲ್ಲರಂತೆಯೆ ನಾನೂ ಹುಡುಕಾಡುತ್ತಿದ್ದೆ. ಆದರೆ ನಾನು ನನ್ನನ್ನೇ ಹುಡುಕುತ್ತಿದ್ದೆ ಎಂಬುದು ನನಗೆ ಆಗ ಗೊತ್ತಾಗಲಿಲ್ಲ " ಎಂದು ಮಹಿಳೆ ಹೇಳುತ್ತಿದ್ದಂತೆಯೇ ಅಷ್ಟು ಕಾಲ ಹುಡುಕಿದ ಸುಸ್ತನ್ನೂ ಮರೆತು ಎಲ್ಲರೂ ನಕ್ಕಿದ್ದಾರೆ!

ಈ ಕತೆಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಆನಂದ್ ಮಹೀಂದ್ರಾ, "ಇದು ಕೇವಲ ಆ ಮಹಿಳೆಯ ಕತೆ ಮಾತ್ರವಲ್ಲ, ನಮ್ಮೆಲ್ಲರ ಕತೆಯಲ್ಲವೇ? ನಾವು ನಮ್ಮ ಸಮಯದ ಬಹುಪಾಲನ್ನು ನಮ್ಮ ಹುಡುಕಾಟದಲ್ಲೇ ಕಳೆಯುತ್ತೇವೆ. ಎಷ್ಟೋ ಬಾರಿ ಏನನ್ನು ಹುಡುಕುತ್ತಿದ್ದೇವೆ ಎಂಬುದೇ ಗೊತ್ತಿಲ್ಲದೆ, ನಾವೂ ಎಲ್ಲರನ್ನು ಅನುಕರಿಸುತ್ತೇವೆ. ಆದರೆ ನಾವು ನಮ್ಮದೇ ಹುಡುಕಾಟದಲ್ಲಿದ್ದೇವೆ ಎಂಬುದು ನಮಗೆ ಆಗ ಗೊತ್ತಾಗುವುದಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.

ಆನಂದ್ ಮಹೀದ್ರಾ ಟ್ವೀಟ್ ಅನ್ನು ಆರು ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+