ನವದೆಹಲಿಯಲ್ಲಿ ಅಲ್ ಖೈದಾ ಭಯೋತ್ಪಾದಕನ ಬಂಧನ
ನವದೆಹಲಿ, ಸೆಪ್ಟೆಂಬರ್ 18: ಅಲ್ ಖೈದಾ ಭಯೋತ್ಪಾದಕ ಸಂಘಟನೆಗೆ ಸೇರಿದ ವ್ಯಕ್ತಿಯೊಬ್ಬನನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಭಯೋತ್ಪಾದಕನನ್ನು ಶಮಾನ್ ಹಾಖ್ ಎಂದು ಗುರುತಿಸಲಾಗಿದ್ದು, ದೆಹಲಿಯ ವಿಕಾಸ್ ಮಾರ್ಗದಲ್ಲಿ ಸೆ.17 ರಾತ್ರಿ ಬಂಧಿಸಲಾಗಿದೆ. ಕಳೆದ ಮಾಲ್ಕು ವರ್ಷಗಳಿಂದ ಈತನಿಗೆ ಅಲ್ ಖೈದಾ ಸಂಘಟನೆಯೊಂಮದಿಗೆ ನಂಟಿತ್ತು.

ದೆಹಲಿಯಲ್ಲಿ ಭಯೋತ್ಪಾದಕ ದಾಳಿ ನಡೆಸಲು ಆತ ಸಂಚು ರೂಪಿಸುತ್ತಿದ್ದ ಎಂದೂ ಮೂಲಗಳು ತಿಳಿಸಿದ್ದು, ಭಯೋತ್ಪಾದಕನ ಕುರಿತು ಮತ್ತಷ್ಟು ಮಾಹಿತಿ ನಿರಕ್ಷಿಸಲಾಗಿದೆ.












Click it and Unblock the Notifications