ಅಮಿತ್ ಶಾ ಅನಾರೋಗ್ಯ: ಶಾ ಅವರೇ ಹೇಳಿದರು ಸತ್ಯ

ನವದೆಹಲಿ, ಮೇ 9: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆರೋಗ್ಯದ ಬಗ್ಗೆ ಎದ್ದಿದ್ದ ವದಂತಿಗಳಿಗೆ ಸ್ವತಃ ಅಮಿತ್ ಶಾ ಅವರೇ ಇಂದು ತೆರೆ ಎಳೆದಿದ್ದಾರೆ.

Recommended Video

      ಜಮೀರ್ ಅಹಮ್ಮದ್ ಅವರನ್ನು ಹಾಡಿ ಹೊಗಳಿದ ಸಿದ್ದರಾಮಯ್ಯ | Siddaramaiah | Oneindia Kannada

      ಈ ಕುರಿತು ಟ್ವೀಟ್ ಮಾಡಿರುವ ಅವರು, ನನಗೇನೂ ಆಗಿಲ್ಲ. ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ. ವದಂತಿಗಳನ್ನು ಎಬ್ಬಿಸುವವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ.

      ಕಳೆದ ನಾಲ್ಕು ದಿನಗಳಿಂದ ಅಮಿತ್ ಶಾ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿ ಎಬ್ಬಿಸಲಾಗಿತ್ತು. ಇದರಿಂದ ಲಕ್ಷಾಂತರ ಬಿಜೆಪಿ ಕಾರ್ಯಕರ್ತರು ವಿಚಲಿತಗೊಂಡಿದ್ದರು‌. ಆದರೆ, ನನಗೇನು ಆಗಿಲ್ಲ. ನಾನು ಆರೋಗ್ಯದಿಂದ ಇದ್ದೇನೆ ಎಂದು ಶಾ ಹೇಳಿದ್ದಾರೆ.

      Amit Shah Rejects Reports About His Health

      ದೇಶದಲ್ಲಿ ಕೊರೊನಾ ಹಾವಳಿಯಿಂದ ಜನ ತತ್ತರಿಸಿದ್ದಾರೆ. ಈ ಬಗ್ಗೆ ನಾವು ಒಟ್ಟಾಗಿ ಕೆಲಸ ಮಾಡಬೇಕಿದೆ. ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡುವವರು ಅದನ್ನೇ ಮಾಡಲಿ. ಭಾರತೀಯ ನಂಬಿಕೆಗಳ ಪ್ರಕಾರ ಸಾವಿನ ಬಗ್ಗೆ ಸುಳ್ಳು ಸುದ್ದಿ ಎಬ್ಬಿಸುವುದರಿಂದ ನಮ್ಮ ಆಯುಷ್ಯವೇ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

      ಇನ್ನು, ಅಮಿಶ್ ಶಾ ಅವರು ಆರೋಗ್ಯದ ಬಗ್ಗೆ ವದಂತಿ ಎಬ್ಬಿಸಿದ ನಾಲ್ವರನ್ನು ಅಹಮದಾಬಾದ್ ನಲ್ಲಿ ಗುಜರಾತ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+