• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿಗಾಗಿ ಏಮ್ಸ್ ಆಸ್ಪತ್ರೆ ನೆಲ ಒರೆಸಿದ ಅಮಿತ್ ಶಾ

|
   ಮೋದಿಗಾಗಿ ಆಸ್ಪತ್ರೆ ನೆಲ ಒರೆಸಿದ ಅಮಿತ್ ಶಾ | Amit Shah | Oneindia Kannada

   ನವದೆಹಲಿ, ಸೆಪ್ಟೆಂಬರ್ 14: ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಇಂದು ದೆಹಲಿಯ ಏಮ್ಸ್ ಆಸ್ಪತ್ರೆಯ ನೆಲ ಒರಿಸಿದ್ದಾರೆ.

   ಬಿಜೆಪಿಯ 'ಸೇವಾ ಸಪ್ತಾಹ'ದ ಅಂಗವಾಗಿ ಗೃಹ ಮಂತ್ರಿ ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಲವು ಟಾಪ್ ನಾಯಕರು ಏಮ್ಸ್‌ ಆಸ್ಪತ್ರೆಯ ನೆಲ ಸ್ವಚ್ಛಗೊಳಿಸಿದರು.

   ಒಬ್ಬನೇ ಒಬ್ಬ ಅಕ್ರಮ ವಲಸಿಗನನ್ನು ಇಲ್ಲಿರಲು ಬಿಡೊಲ್ಲ: ಅಮಿತ್ ಶಾ

   ಸೆಪ್ಟೆಂಬರ್ 17 ರಂದು ಪ್ರಧಾನಿ ಮೋದಿ ಅವರ 69ನೇ ಹುಟ್ಟುಹಬ್ಬ ಇದ್ದು, ಇದರ ಪ್ರಯುಕ್ತ ಸತತ ಒಂದು ವಾರ ಹಲವು ಕಾರ್ಯಕ್ರಮಗಳನ್ನು ಬಿಜೆಪಿ ಹಮ್ಮಿಕೊಂಡಿದೆ. ಇದರ ಭಾಗವಾಗಿಯೇ ಅಮಿತ್ ಶಾ ಅವರು ಏಮ್ಸ್ ಆಸ್ಪತ್ರೆಯ ನೆಲ ಒರೆಸಿದ್ದಾರೆ.

   ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ, ಪ್ರಮುಖರಾದ ವಿಜಯ್ ಘೋಯಲ್, ವಿಜಯೇಂದ್ರ ಗುಪ್ತಾ ಇನ್ನೂ ಹಲವು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.

   ಅಮಿತ್ ಶಾ ಕಟ್ಟುನಿಟ್ಟಿನ ಫರ್ಮಾನಿಗೆ ರಾಜ್ಯ ಬಿಜೆಪಿ ಮುಖಂಡರು ಬೇಸ್ತು

   ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಅಮಿತ್ ಶಾ, 'ಮೋದಿ ಅವರು ತಮ್ಮ ಜೀವನವನ್ನು ಜನ ಸೇವೆಗೆ ಮುಡಿಪಿಟ್ಟಿದ್ದಾರೆ, ಹಾಗಾಗಿ ದೇಶದಾದ್ಯಂತ ಬಿಜೆಪಿ ಕಾರ್ಯಕರ್ತರು ಸೇವಾ ಸಪ್ತಾಹ ಮಾಡಲಿದ್ದಾರೆ' ಎಂದರು.

   ಸೇವಾ ಸಪ್ತಾಹದ ಅಂಗವಾಗಿ ಪಕ್ಷವು ರಕ್ತದಾನ ಶಿಬಿರ, ಸ್ವಚ್ಛತಾ ಕಾರ್ಯಕ್ರಮ, ಆರೋಗ್ಯ ತಪಾಸಣಾ ಶಿಬಿರ, ಆಹಾರ ವಿತರಣೆ ಇನ್ನೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

   English summary
   Home minister Amit Shah cleaned AIIMS hospital flors. BJP orgazing 'Seva Sapthah' to celebrate Narendra Modi's birth day.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X