ಕರ್ನಾಟಕ ಚುನಾವಣೆ: ಮಾಳವೀಯ ಟ್ವೀಟ್ ವಿವಾದಕ್ಕೆ ಬಿಜೆಪಿ ಸ್ಪಷ್ಟೀಕರಣ

ನವದೆಹಲಿ, ಮಾರ್ಚ್ 27: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಚುನಾವಣಾ ಆಯೋಗಕ್ಕೂ ಮೊದಲೇ ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಿಸಿದ್ದರು ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಸ್ಪಷ್ಟೀಕರಣ ನೀಡದಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

"ಅಮಿತ್ ಮಾಳವೀಯ ಅವರ ಟ್ವೀಟ್ ಟಿವಿ ಚಾನೆಲ್ ವೊಂದರ ಸುದ್ದಿಯನ್ನು ಆಧಾರವಾಗಿಟ್ಟುಕೊಂಡು ಮಾಡಿದ್ದು. ಇದರಲ್ಲಿ ಚುನಾವಣಾ ಆಯೋಗದ ಘನತೆಯನ್ನು ಕಳೆಯುವಂಥದ್ದೂ ಏನೂ ಇಲ್ಲ. ಕರ್ನಾಟಕದ ಮುಖಂಡರೊಬ್ಬರೂ ಇದೇ ಸಮಯದಲ್ಲಿ ಚುನಾವಣಾ ದಿನಾಂಕವನ್ನು ಟ್ವೀಟ್ ಮಾಡಿದ್ದರು. ಹಾಗೆಂದು ನಾವು ಮಾಳವೀಯ ಅವರು ಮಾಡಿದ್ದು ಸರಿ ಎಂದು ಸಮರ್ಥಿಸಿಕೊಳ್ಳುತ್ತಿಲ್ಲ" ಎಂದ ಬಿಜೆಪಿ ಮುಖಂಡ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ಇಂದು(ಮಾ.27) ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಾಂಕಗಳನ್ನು ಘೋಷಣೆ ಮಾಡಿತ್ತು. ಆದರೆ ಆಯೋಗ ದಿನಾಂಕ ಘೋಷಿಸುವ ಕೆಲವು ಸಮಯ ಮೊದಲೇ ಚುನಾವಣೆಯ ನಿಖರ ದಿನಾಂಕ(ಮೇ 12)ವನ್ನು ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದರು. ಆದರೆ ಫಲಿತಾಂಶದ ದಿನವನ್ನು ಮೇ 15 ರ ಬದಲಾಗಿ ಮೇ 18 ಎಂದು ತಪ್ಪಾಗಿ ಟ್ವೀಟ್ ಮಾಡಿದ್ದರು.

ಚುನಾವಣಾ ಆಯೋಗ ಯಾವ ಪಕ್ಷ, ಸರ್ಕಾರದ ಭಾಗವೂ ಆಗಿರದ ಒಂದು ಸ್ವತಂತ್ರ ಸಂಸ್ಥೆ. ಆದರೆ ಚುನಾವಣಾ ಆಯೋಗ ಇಂಥ ದಿನವೇ ದಿನಾಂಕ ಘೋಷಿಸುತ್ತದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥರಿಗೆ ಮೊದಲೇ ಗೊತ್ತಿದ್ದುದು ಹೇಗೆ ಎಂದು ಟ್ವಿಟ್ಟರ್ ನಲ್ಲಿ ಸಾಕಷ್ಟು ವಾದ ವಿವಾದಗಳು ಎದ್ದಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+