ಅಮೆರಿಕಕ್ಕೆ ಟಿಕೆಟ್ ಬುಕ್ಕಿಂಗ್ ಆರಂಭಿಸಿದ ಏರ್ ಇಂಡಿಯಾ

ದೆಹಲಿ, ಜುಲೈ 20: ವಂದೇ ಭಾರತ್ ಮಿಷನ್ ನಾಲ್ಕನೇ ಹಂತದಲ್ಲಿ ಭಾರತದಿಂದ ಅಮೆರಿಕಕ್ಕೆ ಅಂತಾರಾಷ್ಟ್ರೀಯ ವಿಮಾನ ಸಂಚಾರ ಆರಂಭವಾಗುತ್ತಿದ್ದು, ಟಿಕೆಟ್ ಬುಕ್ಕಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ.

Recommended Video

      Indiaದಲ್ಲಿ Corona ಕಾಟ ಆಗಸ್ಟ್ ತಿಂಗಳಲ್ಲಿ ತಾರಕಕ್ಕೇರಲಿದೆ! | Oneindia Kannada

      ಜುಲೈ 22 ರಿಂದ ವಿಮಾನ ಪ್ರಯಾಣ ಸಂಚಾರ ಮಾಡಲಿದ್ದು, ಈ ಮಾರ್ಗದಲ್ಲಿ 180 ವಿಮಾನಗಳು ಸಂಚರಿಸಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ.

      ಹೈದರಾಬಾದ್, ಬೆಂಗಳೂರು, ಚೆನ್ನೈ, ಮುಂಬೈ, ಕೊಚ್ಚಿ ಹಾಗೂ ಅಹಮದಾಬಾದ್‌ನಿಂದ ವಿಮಾನಗಳು ಅಮೆರಿಕಕ್ಕೆ ತೆರಳಲಿದೆ. ಜುಲೈ 22 ರಿಂದ ಆಗಸ್ಟ್ 31ರವರೆಗೂ ಈ ಸೇವೆ ಲಭ್ಯವಿರಲಿದೆ.

      Air India starting International flights to US from July 22

      ಯುಎಸ್‌ಗೆ ತೆರಳಲು ಬಯಸುವ ಪ್ರಯಾಣಿಕರು ಅಧಿಕೃತ ವೆಬ್‌ಸೈಟ್, ಬುಕ್ಕಿಂಗ್ ಕೇಂದ್ರಗಳು ಹಾಗೂ ಟ್ರಾವಲ್ ಏಜೆಂಟ್‌ಗಳ ಮೂಲಕ ಟಿಕೆಟ್ ಬುಕ್ ಮಾಡಬಹುದು.

      ವಿಮಾನಯಾನ ಸಚಿವಾಲಯ ನಿಗದಿ ಮಾಡಿರುವ ಟಿಕೆಟ್ ದರದಲ್ಲಿ ದೇಶಿಯ ಖಾಸಗಿ ವಿಮಾನಗಳು ಹಾಗೂ ಏರ್ ಇಂಡಿಯಾ ವಿಮಾನಗಳಿಗೆ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಏರ್ ಇಂಡಿಯಾ ತನ್ನ ಪೈಲೆಟ್‌ಗಳಿಗೆ ಶೇಕಡಾ 60ರಷ್ಟು ವೇತನ ಕಡಿತಗೊಳಿಸಲು ನಿರ್ಧರಿಸಿದೆ.

      ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸು ಉದ್ದೇಶದಿಂದ ಎಲ್ಲ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಇದೀಗ, ವಂದೇ ಭಾರತ್ ಮಿಷನ್ ಅಡಿಯಲ್ಲಿ ನಿಗದಿತ ವೇಳೆಗೆ, ನಿಗದಿತ ವಿಮಾನ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+