ಮತ್ತೆ ತಾಂತ್ರಿಕ ದೋಷ: ಏರ್ ಇಂಡಿಯಾ ಪ್ರಯಾಣಿಕರ ಪರದಾಟ

ನವದೆಹಲಿ, ಏಪ್ರಿಲ್ 29: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಶನ್ ಸಿಸ್ಟೆಮ್ ನಲ್ಲಿ ಕಂಡು ಬಂದ ತಾಂತ್ರಿಕ ದೋಷದ ಕಾರಣ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಕಂಡುಬಂತು.

ಸೋಮವಾರ ಬೆಳಗ್ಗಿನ ಜಾವ 12:20 ರ ಸುಮಾರಿಗೆ ಇಮಿಗ್ರೇಶನ್ ಸಿಸ್ಟಂ ಸರ್ವರ್ ನಲ್ಲಿ ದೋಷ ಕಂಡುಬಂದಿತ್ತು. 40 ನಿಮಿಷಗಳ ಕಾಲ ಸರ್ವರ್ ಡೌನ್ ಆಗಿದ್ದರಿಂದ ಏರ್ ಇಂಡಿಯಾ ವಿಮಾನಗಳು ವಿಳಂಬವಾದವು.

ಈ ಕುರಿತು ಏರ್ಪೋರ್ಟ್ ನಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡುತ್ತಿದ್ದಂತೆಯೇ ಪ್ರಯಾಣಿಕರು ಪರದಾಡುವುದು ಕಂಡುಬಂತು. ಇಮಿಗ್ರೇಶನ್ ಸಿಸ್ಟಂ ಡೆಸ್ಕ್ ಮುಂದೆ ಸಾಕಷ್ಟು ಜನರು ಸಾಲುಗಟ್ಟಿ ನಿಂತಿದ್ದರು. ಈ ಘಟನೆಯ ಕುರಿತು ಹಲವರು ಟ್ವೀಟ್ ಮಾಡಿ ತಮ್ಮ ಬೇಸರ ವ್ಯಕ್ತಪಡಿಸಿದರು.

Air Indias immigration system server faces problem at Delhi airport

ಭಾನುವಾರ ಸಹ ಏರ್ ಇಂಡಿಯಾದ 137 ವಿಮಾನಗಳು 197 ನಿಮಿಷ ತಡವಾಗಿ ಹಾರಾಟ ನಡೆಸಿದ್ದವು. ಇದಕ್ಕೂ ತಾಂತ್ರಿಕ ದೋಷವೇ ಕಾರಣ ಎನ್ನಲಾಗಿತ್ತು.

ಶನಿವಾರವಷ್ಟೇ ಏರ್ ಇಂಡಿಯಾದ ಮೈನ್ ಸರ್ವರ್ ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಐದು ಗಂಟೆಗಳ ಕಾಲ ಸರ್ವರ್ ಕಾರ್ಯ ನಿರ್ವಹಿಸಿರಲಿಲ್ಲ. ಇದರಿಂದ ವಿಶ್ವದಾದ್ಯಂತ ಏರ್ ಇಂಡಿಯಾ ವಿಮಾನಗಳು ಸುಮಾರು ಐದು ಗಂಟೆಗಳ ಕಾಲ ವಿಳಂಬವಾಗಿದ್ದವು. ಈ ಕುರಿತು ಏರ್ ಇಂಡಿಯಾ ಟ್ವೀಟ್ ಮಾಡಿ, ಕ್ಷಮೆ ಕೇಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+