ದೆಹಲಿ ಕಾಂಗ್ರೆಸ್ ಉಸ್ತುವಾರಿ ಕುಲ್ಜೀತ್ ಸಿಂಗ್ ರಾಜೀನಾಮೆ

ನವದೆಹಲಿ, ಜುಲೈ 08: ಎಐಸಿಸಿ ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ ಬೆನ್ನಲ್ಲೆ ಹಲವು ಮಂದಿ ಕಾಂಗ್ರೆಸ್ ಪ್ರಮುಖರು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಾರೆ.

ದೆಹಲಿಯ ಕಾಂಗ್ರೆಸ್ ಉಸ್ತುವಾರಿ ಮತ್ತು ಎಐಸಿಸಿಯ ಕಾರ್ಯದರ್ಶಿ ಹುದ್ದೆಗೆ ಕುಲ್ಜೀತ್ ಸಿಂಗ್ ನಗ್ರಾ ಅವರು ರಾಜೀನಾಮೆ ನೀಡಿದ್ದಾರೆ.

ರಾಹುಲ್ ಗಾಂಧಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿರುವ ಅವರು, 'ನೀವು ಎಐಸಿಸಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ ಕಾರಣಕ್ಕಾಗಿಯೇ ನಾನು ರಾಜೀನಾಮೆ ನೀಡುತ್ತಿದ್ದೇನೆ' ಎಂದು ತಿಳಿಸಿದ್ದಾರೆ.

AICC Secretary Kuljit Singh Nagra tenders his resignation

ದೇಶದ ಕೋಟ್ಯಂತರ ಜನ ನಿಮ್ಮನ್ನು ನಂಬಿದ್ದರು, ದ್ವೇಷದ, ಪ್ರತೀಕಾರದ ಸಂಸ್ಕೃತಿಯ ನಡುವಿನಲ್ಲಿ ಬದುಕಿತ್ತಿರುವವರಿಗೆ ನೀವು ಆಶಾಕಿರಣವಾಗಿದ್ದಿರಿ ಆದರೆ ನೀವು ರಾಜೀನಾಮೆ ನೀಡಿ ಅವರ ಭರವಸೆಗಳನ್ನು ಹುಸಿ ಮಾಡಿದ್ದೀರಿ ಎಂದು ಕುಲ್ಜೀತ್ ಸಿಂಗ್ ನಗ್ರಾ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಇಂದಷ್ಟೆ ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಹಿರಿಯ ಮತ್ತು ರಾಹುಲ್ ಗಾಂಧಿಯ ಆಪ್ತ ಮಿಲಿಂದ್ ದಿಯೋರಾ ಅವರು ಸಹ ರಾಜೀನಾಮೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+