ಅಂತೂ ಇಂತೂ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಗಂಭೀರ್
ನವದೆಹಲಿ, ಮಾರ್ಚ್ 28: ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರು ಭಾರತೀಯ ಜನತಾ ಪಕ್ಷ ಸೇರಿದರೂ ಚುನಾವಣೆ ಸ್ಪರ್ಧಿಸಲು ಟಿಕೆಟ್ ಖಾತ್ರಿಯಾಗಿರಲಿಲ್ಲ. ಆದರೆ, ದೆಹಲಿ ಬಿಜೆಪಿಯ ಘಟಕವು ಇತ್ತೀಚೆಗೆ ಸಿದ್ಧಪಡಿಸಿರುವ 31 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಗೌತಮ್ ಗಂಭೀರ್ ಹೆಸರನ್ನು ಸೇರಿಸಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇದಕ್ಕೂ ಮುನ್ನ 21 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಚುನಾವಣಾ ಸಮಿತಿ ಸಿದ್ಧಪಡಿಸಿತ್ತು. ಆದರೆ, ಬಿಜೆಪಿ ಹೈಕಮಾಂಡ್ ಈ ಪಟ್ಟಿಯನ್ನು ತಿರಸ್ಕರಿಸಿ, ಪಟ್ಟಿ ಬದಲಾಯಿಸುವಂತೆ ಸೂಚಿಸಿತ್ತು. ಹೀಗಗಿ, ಹಳೆ ಪಟ್ಟಿಗೆ ಇನ್ನು 10 ಪಟ್ಟಿ ಹೆಸರನ್ನು ಸೇರಿಸಿ ಹೊಸ ಪಟ್ಟಿಯನ್ನು ನೀಡಲಾಗಿದೆ ಎಂದು ದೆಹಲಿ ಬಿಜೆಪಿ ಮುಖಂಡರೊಬ್ಬರು ಹೇಳಿದರು.
ವಕೀಲೆ ಮೀನಾಕ್ಷಿ ಲೇಖಿ ಅವರು ಪ್ರತಿನಿಧಿಸುತ್ತಿರುವ ನವದೆಹಲಿ ಲೋಕಸಭೆ ಸ್ಥಾನದಿಂದ ಸ್ಪರ್ಧಿಸಲು ಗೌತಮ್ ಗಂಭೀರ್ ಅವರು ಬಯಸಿದ್ದಾರೆ. ಹೀಗಾಗಿ, ಹೊಸ ಪಟ್ಟಿಯಲ್ಲಿ ರವೀಂದ್ರ ಗುಪ್ತಾ ಹಾಗೂ ಸತೀಶ್ ಉಪಾಧ್ಯಾಯ್ ಅವರ ಹೆಸರು ಕೂಡಾ ಸೇರಿಸಲಾಗಿದೆ.

ಮೋಹನ್ ಲಾಲ್ ಗಿಹಾರಾ, ಯೋಗೇಂದ ಚಂಡೋಲಿಯಾ, ರವೀಂದ್ರ ಇಂದರ್ ರಾಜ್ ಅವರು ಉತ್ತರ ಪಶ್ಚಿಮ ದೆಹಲಿ (ಮೀಸಲು) ಕ್ಷೇತ್ರದ ಟಿಕೆಟ್ ಗಾಗಿ ಕಾದಿದ್ದಾರೆ.
ಬಿಜೆಪಿ ಯುವ ಮೋರ್ಚಾದ ಮಾಜಿ ಅಧ್ಯಕ್ಷ ನಕುಲ್ ಭಾರದ್ವಾಜ್ ಅವರಿಗೆ ಪೂರ್ವ ದೆಹಲಿಯ ಸ್ಥಾನ ಸಿಗುವ ಸಾಧ್ಯತೆಯಿದೆ.












Click it and Unblock the Notifications