ದೆಹಲಿ, ಮತ್ತೊಂದು ಸಮೀಕ್ಷೆ: ಬದಲಾಯಿತೇ ಮತದಾರನ ಮೂಡ್
ನವದೆಹಲಿ, ಜ 17: ದೆಹಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಅಲ್ಲಿನ ಮತದಾರರ ಮೂಡ್ ಕೂಡಾ ಬದಲಾಗುತ್ತಿದೆಯೇ?
ಶುಕ್ರವಾರ (ಜ 16) ಹೊರಬಿದ್ದ ಮತ್ತೊಂದು ಚುನಾವಣಾಪೂರ್ವ ಸಮೀಕ್ಷೆಯ ಫಲಿತಾಂಶ, ಮತದಾರರ ಮನಸ್ಥಿತಿ ಹಿಂದಿಗಿಂತ ವಿಭಿನ್ನವಾಗಿದೆ ಎನ್ನುವುದನ್ನು ತೋರಿಸುತ್ತದೆ.
ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಮತ್ತು ಶಾಜಿಯಾ ಇಲ್ಮಿ ಬಿಜೆಪಿಗೆ ಸೇರ್ಪಡೆಯಾಗುವ ಮುನ್ನ ನಡೆಸಿದ ಸಮೀಕ್ಷೆ ಇದಾಗಿದೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. (ಇಂಡಿಯಾ ಟುಡೆ ಸರ್ವೇ)
ಎಬಿಪಿ ನ್ಯೂಸ್ ಮತ್ತು ಎ ಸಿ ನೀಲ್ಸನ್ ನಡೆಸಿದ ಜಂಟಿ ಸಮೀಕ್ಷೆಯ ಪ್ರಕಾರ 2013ರಲ್ಲಿ ನಡೆದ ಚುನಾವಣೆಯ ಫಲಿತಾಂಶದಂತೆ ಈ ಬಾರಿಯೂ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಸುಧಾರಿಸುವುದಿಲ್ಲ.
70 ಶಾಸಕರ ದೆಹಲಿ ಅಸೆಂಬ್ಲಿಗೆ ಚುನಾವಣೆ ಫೆಬ್ರವರಿ ಏಳರಂದು ನಡೆಯಲಿದ್ದು, ಫೆಬ್ರವರಿ ಹತ್ತಕ್ಕೆ ಫಲಿತಾಂಶ ಹೊರಬೀಳಲಿದೆ.
ಆದರೆ, ಈಗ ಹೊರಬಿದ್ದ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಪಕ್ಷ ದೆಹಲಿಯಲ್ಲಿ ಸರಕಾರ ರಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಬಿಜೆಪಿಗೆ ಸರಕಾರ ರಚಿಸುವುದು ಹೇಗೆ ಎನ್ನುವುದು ಅರಿತಿದೆ ಎನ್ನುವ ಪ್ರಧಾನಿ ಮೋದಿ ಹೇಳಿಕೆಗೆ ಸಮೀಕ್ಷೆಯಲ್ಲಿ ಜನರಿಂದ ಸಹಮತ ವ್ಯಕ್ತವಾಗಿದೆ. (ದೆಹಲಿ ಗದ್ದುಗೆ ಆಮ್ ಆದ್ಮಿಗೆ)
ದೆಹಲಿಯಲ್ಲಿ ಮಂಕಾಗುತ್ತಿರುವ ಮೋದಿ ಜನಪ್ರಿಯತೆ, ಸಮೀಕ್ಷೆಯ ಪ್ರಕಾರ ಯಾರಿಗೆ ಎಷ್ಟು ಸ್ಥಾನ ಸಿಗಬಹುದು. ಮುಂದೆ ಓದಿ..

ಮೋದಿ ಮೋಡಿ ಕಮ್ಮಿಯಾಗುತ್ತಿದೆ
ಸಮೀಕ್ಷೆಯ ಪ್ರಕಾರ ಪ್ರಧಾನಿ ಮೋದಿಯವರ ಜನಪ್ರಿಯತೆ ದಿನದಿಂದ ದಿನಕ್ಕೆ ಕುಗ್ಗುತ್ತಿದೆ. ನವೆಂಬರ್ ನಲ್ಲಿ ಈ ಕುರಿತಾದ ನಡೆದ ಸಮೀಕ್ಷೆಯಲ್ಲಿ ಮೋದಿ ಶೇ. 63, ಕೇಜ್ರಿವಾಲ್ ಶೇ. 25, ಡಿಸೆಂಬರ್ ನಲ್ಲಿ ಮೋದಿ ಶೇ. 58, ಕೇಜ್ರಿ ಶೇ. 33 ಮತ್ತು ಜನವರಿಯಲ್ಲಿ ನಡೆದ ಸಮೀಕ್ಷೆಯಲ್ಲಿ ಮೋದಿ ಶೇ. 49 ಮತ್ತು ಅರವಿಂದ್ ಕೇಜ್ರಿವಾಲ್ ಶೇ. 42 ಜನಪ್ರಿಯ ನಾಯಕರೆಂದು ಸಮೀಕ್ಷೆಯಲ್ಲಿ ಜನಾಭಿಪ್ರಾಯ ವ್ಯಕ್ತವಾಗಿತ್ತು.

ಮುಖ್ಯಮಂತ್ರಿ ಪಟ್ಟಕ್ಕೆ ಸೂಕ್ತರಾರು?
ನವೆಂಬರ್
ಕೇಜ್ರಿವಾಲ್ : ಶೇ. 39
ಹರ್ಷವರ್ಧನ್ : ಶೇ. 38
ಡಿಸೆಂಬರ್
ಕೇಜ್ರಿವಾಲ್ : ಶೇ. 43
ಹರ್ಷವರ್ಧನ್ : ಶೇ. 39
ಜನವರಿ
ಕೇಜ್ರಿವಾಲ್ : ಶೇ. 54
ಹರ್ಷವರ್ಧನ್ : ಶೇ. 29

49ದಿನದ ಈ ಹಿಂದಿನ ಕೇಜ್ರಿ ಸರಕಾರದ ಆಡಳಿತ ಹೇಗಿತ್ತು?
ಅತ್ಯುತ್ತಮ ಆಡಳಿತ : ಶೇ. 28
ಉತ್ತಮ ಆಡಳಿತ : 33
ಪರವಾಗಿಲ್ಲ : ಶೇ. 22
ಕೆಟ್ಟ ಆಡಳಿತ : ಶೇ. 9
ಅತಿ ಕೆಟ್ಟ ಆಡಳಿತ : ಶೇ. 3

ಸಮೀಕ್ಷೆಯ ಪ್ರಕಾರ ಯಾರಿಗೆ ಎಷ್ಟು ಸ್ಥಾನ?
ಬಿಜೆಪಿ : 34
ಆಮ್ ಆದ್ಮಿ : 28
ಕಾಂಗ್ರೆಸ್ : 8
ಇತರರು : 0

ಬಲಗೊಳ್ಳುತ್ತಿರುವ ಆಮ್ ಆದ್ಮಿ
ಎರಡು ತಿಂಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಆಮ್ ಆದ್ಮಿ ಪಕ್ಷ ಬಲಗೊಳ್ಳುತ್ತಿದೆ. ಈ ಸಮೀಕ್ಷೆಯ ಪ್ರಕಾರ ದೆಹಲಿಯಲ್ಲಿ ಮತ್ತೆ ತ್ರಿಶಂಕು ಪರಿಸ್ಥಿತಿ ನಿರ್ಮಾಣವಾಗಲಿದೆ. ಇನ್ನು ಕಿರಣ್ ಬೇಡಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ ದೆಹಲಿಯಲ್ಲಿ ಬಿಜೆಪಿಗೆ ಯಾವ ರೀತಿಯಲ್ಲಿ ಲಾಭವಾಗಲಿದೆ ಎನ್ನುವ ಕುತೂಹಲದ ಲೆಕ್ಕಾಚಾರ ಮುಂದಿನ ಸಮೀಕ್ಷೆಯಲ್ಲಿ ಲಭ್ಯವಾಗಬಹುದು.












Click it and Unblock the Notifications