ರೈಲ್ವೆ ಪ್ರಯಾಣಕ್ಕೆ ಆರೋಗ್ಯ ಸೇತು ಆಪ್ ಕಡ್ಡಾಯ

ನವ ದೆಹಲಿ, ಮೇ 12: ರೈಲ್ವೆ ಪ್ರಯಾಣಕ್ಕೆ ಆರೋಗ್ಯ ಸೇತು ಆಪ್ ಕಡ್ಡಾಯ ಮಾಡಲಾಗಿದೆ. ವಿಶೇಷ ರಾಜಧಾನಿ ರೈಲುಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಆರೋಗ್ಯ ಸೇತು ಆಪ್ ಹೊಂದಿರಬೇಕು.

ರೈಲ್ವೆ ಇಲಾಖೆ ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ''ರೈಲ್ವೆ ಇಲಾಖೆ ಕೆಲವೊಂದು ಪ್ಯಾಸೆಂಜರ್ ರೈಲುಗಳ ಸಂಚಾರ ಶುರು ಮಾಡಿದ್ದು, ಇದರಲ್ಲಿ ಪ್ರಯಾಣ ಮಾಡುವವರು ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು'' ಎಂದು ತಿಳಿಸಿದ್ದಾರೆ.

ಈಗಾಗಲೇ ಗೃಹ ಸಚಿವಾಲಯ ಆರೋಗ್ಯ ಸೇತು ಆಪ್ ಇಟ್ಟುಕೊಳ್ಳುವಂತೆ ಹೇಳಿದೆ. COVID-19 ಕಂಟೈನ್ಮೆಂಟ್ ವಲಯಗಳಲ್ಲಿ ವಾಸಿಸುವವರಿಗೆ ಮೊಬೈಲ್ ಅಪ್ಲಿಕೇಶನ್ ಹೊಂದುವುದು ಅತ್ಯಗತ್ಯವಾಗಿದೆ ಎಂದು MHA ಹೇಳಿದೆ.

Aarogya Setu Now Mandatory For Railway Travel

ಪ್ರಧಾನಿ ನರೇಂದ್ರ ಮೋದಿ ನಿನ್ನೆ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಆದರೆ, ಸಭೆಯಲ್ಲಿ ಹಲವಾರು ರಾಜ್ಯಗಳು ರೈಲುಗಳ ಪುನರಾರಂಭಿಸುವುದನ್ನು ವಿರೋಧಿಸಿವೆ.

ಆರೋಗ್ಯ ಸೇತು ಆಪ್ ಇಲ್ಲಿಯವರೆಗೆ 9.8 ಕೋಟಿ ಸ್ಮಾರ್ಟ್‌ ಫೋನ್‌ಗಳಲ್ಲಿ ಬಳಸಲಾಗುತ್ತಿದೆ. COVID-19 ಹರಡುವಿಕೆಯನ್ನು, ಬಳಕೆದಾರರಿಗೆ ವೈದ್ಯಕೀಯ ಸಲಹೆಗಳನ್ನು, ಸಂಪರ್ಕ-ಪತ್ತೆಹಚ್ಚಲು ಸರ್ಕಾರವು ಬಳಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+