ಭಾರತದಲ್ಲಿ ಒಂದೇ ದಿನ 73 ಬಿಎಸ್ಎಫ್ ಯೋಧರಿಗೂ ಕೊವಿಡ್-19 ಸೋಂಕು

ನವದೆಹಲಿ, ಜುಲೈ.10: ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್ ರನ್ನೂ ಮಹಾಮಾರಿಯ ಭೀತಿ ಹೆಚ್ಚಾಗುತ್ತಿದೆ. ವೈದ್ಯರು, ಪೊಲೀಸರು, ಅಂಗನವಾಡಿ ಕಾರ್ಯಕರ್ತರು ಅಷ್ಟೇ ಅಲ್ಲದೇ ಗಡಿ ಭದ್ರತಾ ಸಿಬ್ಬಂದಿಗೂ ಸೋಂಕು ತಗಲುತ್ತಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 73 ಮಂದಿ ಗಡಿ ಭದ್ರತಾ ಸಿಬ್ಬಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಇನ್ನು, ಬಿಎಸ್ಎಫ್ ನ 14 ಮಂದಿ ಸೋಂಕಿತ ಸಿಬ್ಬಂದಿಯು ಗುಣಮುಖರಾಗಿದ್ದಾರೆ.

Recommended Video

      Asia cup postponed till june 2021 | Oneindia Kannada

      ಮತ್ತೆ 30 ಬಿಎಸ್ಎಫ್ ಯೋಧರಿಗೆ ಕೊರೊನಾ ಸೋಂಕು ಪತ್ತೆ
      ದೇಶದಲ್ಲಿ ಒಟ್ಟು 1659 ಮಂದಿ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಸಿಬ್ಬಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ದೃಢಪಟ್ಟಿದೆ. ಈ ಪೈಕಿ 927 ಸಿಬ್ಬಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಾಕಿ ಉಳಿದಿರುವ 732 ಮಂದಿ ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಮಾಹಿತಿ ನೀಡಿದೆ.

      73 Border Security Force Personnel Tested positive for Coronavirus In Single Day

      ಭಾರತದಲ್ಲಿ 26 ಸಾವಿರ ಮಂದಿಗೆ ಕೊರೊನಾವೈರಸ್:
      ಭಾರತದಲ್ಲಿ ಒಂದೇ ದಿನ 26,506 ಕೊರೊನಾ ಸೋಂಕಿತರು ಪತ್ತೆ. ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 7,93,802ಕ್ಕೆ ಏರಿಕೆ. ಈವರೆಗೂ 21,604 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಒಟ್ಟು 7,93,802 ಸೋಂಕಿತರ ಪೈಕಿ 2,76,685 ಪ್ರಕರಣಗಳು ಸಕ್ರಿಯವಾಗಿದೆ. 4,95,513 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+