ಮತ್ತೆ 30 ಬಿಎಸ್ಎಫ್ ಯೋಧರಿಗೆ ಕೊರೊನಾ ಸೋಂಕು ಪತ್ತೆ

ದೆಹಲಿ, ಮೇ 8: ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಮತ್ತೆ ಹೊಸದಾಗಿ 30 ಯೋಧರಿಗೆ ಕೊರೊನಾ ವೈರಸ್ ದೃಢವಾಗಿದೆ. ಈ ಮೂಲಕ ಸೊಂಕಿತರ ಬಿಎಸ್ಎಫ್ ಯೋಧರ ಸಂಖ್ಯೆ 223ಕ್ಕೆ ಏರಿಕೆಯಾಗಿದೆ.

ಹೊಸ 30 ಪ್ರಕರಣಗಳ ಪೈಕಿ 24 ಕೇಸ್‌ಗಳು ತ್ರಿಪುರದಲ್ಲಿ ಪತ್ತೆಯಾಗಿದೆ. ಉಳಿದ ಆರು ಸೋಂಕಿತರು ದೆಹಲಿಯಲ್ಲಿ ವರದಿಯಾಗಿದ್ದಾರೆ. ದೆಹಲಿಯ ಆರು ಜನರ ಪೈಕಿ ಇಬ್ಬರು ಬಿಎಸ್ಎಫ್ ಮುಖ್ಯ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಎಂದು ತಿಳಿದು ಬಂದಿದೆ.

ಈ ಮೂಲಕ ದೆಹಲಿಯ ಮುಖ್ಯ ಕಚೇರಿಯಲ್ಲಿ ಮತ್ತೊಂದು ಅಂತಸ್ತಿನ ಮಹಡಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಈ ಹಿಂದೆ ಹೆಚ್ಚುವರಿ ಮಹಾನಿರ್ದೇಶಕ ಶ್ರೇಣಿಯ ಅಧಿಕಾರಿ ಹಾಗೂ ಮುಖ್ಯ ಪೇದೆಯೊಬ್ಬರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಎರಡು ಅಂತಸ್ತುಗಳನ್ನು ಸೀಲ್‌ಡೌನ್ ಮಾಡಲಾಗಿತ್ತು.

30 BSF Army Tested COVID19 Positive Today

ಇನ್ನು ಕಳೆದ ಮೂರು ದಿನಗಳಲ್ಲಿ 156 ಕೇಸ್‌ಗಳು ಬಿಎಸ್ಎಫ್‌ನಲ್ಲಿ ಪತ್ತೆಯಾಗಿದೆ. ಮೇ 6 ರಂದು 43 ಕೇಸ್, ಮೇ 7 ರಂದು 85 ಪ್ರಕರಣ ಹಾಗೂ ಇಂದು 30 ಸೋಂಕಿತರು ವರದಿಯಾಗಿದ್ದಾರೆ.

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಪೈಕಿ ಬಿಎಸ್ಎಫ್ ಇಲಾಖೆಯಲ್ಲಿ ಅತಿ ಹೆಚ್ಚು ಸೋಂಕು ವರದಿಯಾಗಿದೆ. ಒಟ್ಟಾರೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ 500 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ವರದಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+